ಓದಿದ್ದು ಎಂಜಿನಿಯರಿಂಗ್, 24ನೇ ವಯಸ್ಸಿನಲ್ಲಿ ಲೆದರ್ ಬಾಲ್ ಅಭ್ಯಾಸ – ಈಗ ಸ್ಟಾರ್ ಬೌಲರ್

Public TV
2 Min Read
Akash Madhwal

– ಲಕ್ನೋ ವಿರುದ್ಧ 5 ವಿಕೆಟ್ ಕಿತ್ತ ಆಕಾಶ್

ಬೆಂಗಳೂರು: ಬಾಲ್ಯದಲ್ಲೇ ಲೆದರ್ ಬಾಲ್‍ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದರೆ ಮಾತ್ರ ಆತ ಮುಂದೆ ಸ್ಟಾರ್ ಆಟಗಾರನಾಗುತ್ತಾನೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಈ ನಂಬಿಕೆ ಸುಳ್ಳು, ಮನಸ್ಸಿದ್ದರೆ ಯಾವ ವಯಸ್ಸಿನಲ್ಲೂ ಅಭ್ಯಾಸ ಮಾಡಿದರೆ ಉತ್ತಮ ಆಟಗಾರನಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಕಾಶ್.

ಕೆಲವು ವರ್ಷಗಳ ಹಿಂದೆ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಉತ್ತರಾಖಂಡ್ ಮೂಲದ ಯುವ ಎಂಜಿನಿಯರ್ ಆಕಾಶ್ ಮಧ್ವಾಲ್ (Akash Madhwal) ಈಗ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

2019ರಲ್ಲಿ ಮೊದಲ ಬಾರಿ ರೆಡ್ ಬಾಲ್ ಕ್ರಿಕೆಟ್ ಟ್ರಯಲ್ಸ್‍ನಲ್ಲಿ ಪಾಲ್ಗೊಂಡಿದ್ದ ಆಕಾಶ್, ಮೊದಲ ಪ್ರಯತ್ನದಲ್ಲೇ ಉತ್ತರಾಖಂಡ್ ತಂಡದ ಅಂದಿನ ಕೋಚ್ ವಸೀಮ್ ಜಾಫರ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. 24ನೇ ವಯಸ್ಸಿನವರೆಗೂ ಲೆದರ್ ಬಾಲ್ ಆಡಿರದ ಆಕಾಶ್, ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಎದುರು 3.3 ಓವರ್‌ಗಳಲ್ಲಿ 5 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ದಾಖಲೆ ಸರಿಗಟ್ಟಿದ್ದರು.

Akash Madhwal 1

ಈ ಮೂಲಕ 16ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಅಸಾಧಾರಣ ಬೌಲಿಂಗ್ ಪ್ರದರ್ಶನದ ಬಲದಿಂದ ಮುಂಬೈ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಎಲ್‍ಎಸ್‍ಜಿ ಎದುರು 81 ರನ್‍ಗಳ ಜಯ ದಾಖಲಿಸಿದೆ.

ಕೋಚ್ ಹೇಳೋದು ಏನು?
ವಿಶಿಷ್ಟ ಬೌಲಿಂಗ್ ಶೈಲಿಯ ಆಕಾಶ್ ಅವರಲ್ಲಿ ವಿಶೇಷ ಸಾಮಥ್ರ್ಯವಿದೆ. ಹೀಗಾಗಿ 2019ರ ಕರ್ನಾಟಕ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯಕ್ಕೆ ಅವರನ್ನು ಅಂದಿನ ಕೋಚ್ ವಸೀಮ್ ಜಾಫರ್ ನೇರವಾಗಿ ಆಯ್ಕೆ ಮಾಡಿದ್ದರು. ಟೂರ್ನಿಯಲ್ಲಿ ಅವರು ರನ್ ನೀಡಿದರೂ ಬೌಲಿಂಗ್ ಮಾಡಿಸಿದ್ದೆ. ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ಅವರ ಬೌಲಿಂಗ್ ಸುಧಾರಣೆಗೊಳ್ಳುತ್ತದೆ ಎಂದಿದ್ದೆ ಎಂದು ಮುಖ್ಯ ಕೋಚ್ ಮನೀಶ್ ಜಾ ಹೇಳಿದ್ದಾರೆ.

Akash Madhwal 2

ಆಕಾಶ್ ಟೆನಿಸ್ ಬಾಲ್ ಆಟಗಾರ ಹೀಗಾಗಿ ಅವರ ಬೌಲಿಂಗ್‍ನಲ್ಲಿ ವೇಗವಿತ್ತಾದರೂ ನೇರ ಮತ್ತು ನಿಖರತೆ ಇರಲಿಲ್ಲ. ಈ ನಡುವೆ ತಮ್ಮ ಬೌಲಿಂಗ್‍ನಲ್ಲಿ ಹಲವು ಪ್ರಯೋಗ ಕೂಡ ಮಾಡುತ್ತಿದ್ದರು. ಉತ್ತಮ ಸಾಮಥ್ರ್ಯ ಇರುವಾಗ ಸ್ಲೋ ಬಾಲ್ ಪ್ರಯತ್ನ ಯಾಕೆ ಎಂದಿದ್ದೆ. ಈಗ ಉತ್ತಮ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.

ಟೀಮ್ ಇಂಡಿಯಾ ವಿಕೆಟ್‍ಕೀಪರ್ ರಿಷಭ್ ಪಂತ್ (Rishabh Pant) ಅವರ ಉತ್ತರಾಖಂಡ್ ನಿವಾಸದ ಎದುರು ಮನೆಯಲ್ಲೇ ಆಕಾಶ್ ಮಧ್ವಾಲ್ ಕೂಡ ಇದ್ದಾರೆ. ಆಕಾಶ್ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, 2013ರಲ್ಲಿ ವೀರ ಮರಣ ಹೊಂದಿದ್ದಾರೆ. ಓದಿನಲ್ಲಿ ಬಹಳ ಚುರುಕಿದ್ದ ಆಕಾಶ್ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ಕ್ರಿಕೆಟ್‍ನ್ನು ಕೇವಲ ಹವ್ಯಾಸವನ್ನಾಗಿ ತೆಗೆದುಕೊಂಡಿದ್ದ ಆಕಾಶ್ ಇಂದು ಉತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್

Share This Article