ನವದೆಹಲಿ: ಇತ್ತೀಚೆಗಷ್ಟೆ ಪ್ರಾರಂಭವಾಗಿದ್ದ ಆಕಾಶ ಏರ್ (Akasa Air) ವಿಮಾನವೊಂದಕ್ಕೆ (Plane) ಹಕ್ಕಿಯೊಂದು (Bird) ಬಡಿದಿರುವ ಘಟನೆ ಗುರುವಾರ ಬೆಳಗ್ಗೆ ನಡೆಸಿದೆ. ಅದೃಷ್ಟವಶಾತ್ ಅನಾಹುತ ತಪ್ಪಿದ್ದು, ವಿಮಾನದ ಮೂತಿಗೆ ಸ್ವಲ್ಪ ಮಟ್ಟದ ಹಾನಿಯಾಗಿದೆ.
ಇಂದು ಬೆಳಗ್ಗೆ ಅಹಮದಾಬಾದ್‌ನಿಂದ (Ahmedabad) ಹೊರಟಿದ್ದ ಆಕಾಶ ಏರ್ ವಿಮಾನ ಬೋಯಿಂಗ್ 738 ಮ್ಯಾಕ್ಸ್ 8 ಭೂಮಿಯಿಂದ ಸುಮಾರು 1,900 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಸಂದರ್ಭ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ದೆಹಲಿಯಲ್ಲಿ (Delhi) ವಿಮಾನ ಇಳಿದ ಬಳಿಕ ಅದಕ್ಕೆ ಹಕ್ಕಿ ಬಡಿದಿರುವುದು ಗಮನಕ್ಕೆ ಬಂದಿದೆ. ಇದರಿಂದ ವಿಮಾನದ ಮೂತಿಗೆ ಹಾನಿಯಾಗಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ತಿಳಿಸಿದೆ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಚಿತ್ರಮಂದಿರಕ್ಕೆ ಮುತ್ತಿಗೆ – ಗಂಧದ ಗುಡಿ ಸಿನಿಮಾ ಪ್ರದರ್ಶನಕ್ಕೆ ಪಟ್ಟು
Advertisement
Advertisement
ಈ ಹಿಂದೆ ಅಕ್ಟೋಬರ್ 14 ರಂದು ಬೆಂಗಳೂರಿನಿಂದ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಹಕ್ಕಿ ಬಡಿದ ಪರಿಣಾಮ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ ಭರ್ಜರಿ ಪೋಸ್ ಸೆರೆಹಿಡಿದ ಸಿಎಂ ಬೊಮ್ಮಾಯಿ!