CinemaLatestMain PostSouth cinema

ಹೆಂಡತಿ ಜೊತೆ ರೋಮ್ಯಾಂಟಿಕ್ ಮೂಡ್‍ನಲ್ಲಿ ತಲಾ ಅಜಿತ್

ಕಾಲಿವುಡ್ ನಟ ತಲಾ ಅಜಿತ್ ಮತ್ತು ಶಾಲಿನಿ ಕ್ಯಾಮೆರಾ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ ಈ ದಂಪತಿಯ ಕ್ಯೂಟ್ ಫೋಟೋಗಳು ಮಾತ್ರ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಈ ಜೋಡಿಯ ರೋಮ್ಯಾಂಟಿಕ್ ಫೋಟೋವೊಂದನ್ನು ಶಾಲಿನಿ ಅವರ ಸಹೋದರಿ ಶಾಮ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಜಿತ್ ಹಾಗೂ ಶಾಲಿನಿ ಅವರದ್ದು ಲವ್ ಮ್ಯಾರೇಜ್. ಕೇರಳ ಮೂಲದ ಶಾಲಿನಿ ಅವರನ್ನು ಅಜಿತ್ 2000ರ ಏಪ್ರಿಲ್ 24ರಂದು ವಿವಾಹವಾದರು. ಸದ್ಯ ಈ ಜೋಡಿ ಮದುವೆಯಾಗಿ 23 ವರ್ಷ ಕಳೆದಿದ್ದು, ಇವರ ವಿವಾಹ ವಾರ್ಷಿಕೋತ್ಸವಕ್ಕೆ ಶಾಲಿನಿ ಅವರ ಸಹೋದರಿ ಶಾಮ್ಲಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಶುಭಕೋರಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

 

View this post on Instagram

 

A post shared by Shamlee (@shamlee_official)

ಫೋಟೋದಲ್ಲಿ ಅಜಿತ್ ಶಾಲಿನಿ ಅವರನ್ನು ಹಿಂದಿನಿಂದ ತಬ್ಬಿಕೊಂಡು ರೋಮ್ಯಾಂಟಿಕ್ ಆಗಿ ಶಾಲಿನಿ ಅವರ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ 23 ವರ್ಷಗಳ ಒಗ್ಗಟ್ಟಿನ ದಾಂಪತ್ಯ ಎಂದು ಶಾಮ್ಲಿ ಬರೆಯಲಾಗಿದೆ.

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಅಜಿತ್ ಹಾಗೂ ಶಾಲಿನಿಗೆ ಅನುಷ್ಕಾ ಕುಮಾರ್, ಅದ್ವಿಕ್ ಕುಮಾರ್ ಎಂಬ ಮುದ್ದಾದ ಮಕ್ಕಳಿದ್ದಾರೆ.  ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

YouTube video

Leave a Reply

Your email address will not be published. Required fields are marked *

Back to top button