ತಮಿಳು ಸಿನಿಮಾ ರಂಗದ ಇಬ್ಬರು ಸೂಪರ್ ಸ್ಟಾರ್ ಸಿನಿಮಾ ಒಂದೇ ದಿನದಂದು ಬಿಡುಗಡೆ ಆಗಿದೆ. ಅದು ಎಂಟು ವರ್ಷಗಳ ನಂತರ ಈ ಸ್ಟಾರ್ ನಟರ ಚಿತ್ರಗಳು ಮುಖಾಮುಖಿ ಆಗುತ್ತಿವೆ. ಹಾಗಾಗಿ ಸಹಜವಾಗಿಯೇ ಸ್ಟಾರ್ ವಾರ್ ಕ್ರಿಯೇಟ್ ಆಗಿತ್ತು. ಆ ಇಬ್ಬರೂ ಕಲಾವಿದರ ಅಭಿಮಾನಿಗಳು ಕೂಡ ಕಳೆದ ಹದಿನೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಜಗಳಕ್ಕೆ ನಾಂದಿ ಹಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿದ್ದ ಗಲಾಟೆ, ಇದೀಗ ನಿಜ ಸ್ವರೂಪ ಪಡೆದುಕೊಂಡಿದೆ.
Advertisement
ಹೌದು, ಇವತ್ತು ಅಜಿತ್ ನಟನೆಯ ‘ತುಣಿವು’ ಮತ್ತು ವಿಜಯ್ ನಟನೆಯ ‘ವಾರಿಸು’ ಸಿನಿಮಾ ಏಕಕಾಲಕ್ಕೆ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ರಿಲೀಸ್ ಆದ ಅಷ್ಟೂ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಈ ಗೆಲುವನ್ನು ಸಂಭ್ರಮಿಸಬೇಕಿದ್ದ ಅಭಿಮಾನಿಗಳು, ಒಬ್ಬರಿಗೊಬ್ಬರು ಪೋಸ್ಟರ್ ಹರಿದುಕೊಂಡು ಕಿತ್ತಾಡಿದ್ದಾರೆ. ಅಭಿಮಾನಿಗಳ ಈ ಅತಿರೇಕಕ್ಕೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ. ಇದನ್ನೂ ಓದಿ:‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್
Advertisement
Advertisement
ಚೆನ್ನೈನ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಮೊದಲು ಅಜಿತ್ ಅಭಿಮಾನಿಗಳು ಪೋಸ್ಟರ್ ಹರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಸುದ್ದಿ ಹರಡಿ ಅಜಿತ್ ಅಭಿಮಾನಿಗಳು ಕೂಡ ಅದೇ ಕೆಲಸ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರ ಮಧ್ಯ ಪ್ರವೇಶವಾಗಿ ಲಾಠಿ ಚಾರ್ಜ್ ಮಾಡುವ ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಡೆದಿದ್ದಾರೆ.
Advertisement
ಮೊದಲಿನಿಂದಲೂ ಅಜಿತ್ ಮತ್ತು ವಿಜಯ್ ಅಭಿಮಾನಿಗಳು ಹೀಗೆ ಬಡಿದಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಈ ಬಾರಿ ಥಿಯೇಟರ್ ವಿಚಾರವಾಗಿ ತುಣಿವು ಮತ್ತು ವಾರಿಸು ನಿರ್ಮಾಪಕರ ನಡುವೆ ತೀರ್ವ ಸ್ಪರ್ಧಿ ಏರ್ಪಟ್ಟಿತ್ತು. ವಿಜಯ್ ಸಿನಿಮಾಗೆ ಅತೀ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದು ಅಜಿಯ್ ಅವರ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿತ್ತು. ಮೊದಲು ಸೋಷಿಯಲ್ ಮೀಡಿಯಾದಲ್ಲಿ ಹತ್ತಿಕೊಂಡ ದ್ವೇಷದ ಉರಿ, ಇದೀಗ ಚಿತ್ರಮಂದಿರತನಕ ಕಾಲಿಟ್ಟಿದೆ. ಮುಂದೆ ಈ ಗಲಾಟೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k