ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (National Security Advisor) ಅಜಿತ್ ದೋವಲ್ (Ajit Doval) ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿದೆ.
ಜೂನ್ 10 ರಿಂದ ಜಾರಿಗೆ ಬರುವಂತೆ ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಹಾಗೂ ಪಿ.ಕೆ.ಮಿಶ್ರಾ ಅವರನ್ನು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರವಧಿ ವಿಸ್ತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ – ಅಧಿಕಾರಿಗಳ ಜೊತೆ ಸಭೆ ನಡೆಸಿದ ಮೋದಿ
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರದಲ್ಲಿ ಇರುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇವರು ತಮ್ಮ ಹುದ್ದೆಯಲ್ಲಿರುತ್ತಾರೆ ಎಂದು ನೇಮಕಾತಿಗಳನ್ನು ಪ್ರಕಟಿಸುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೋವಲ್ ಮತ್ತು ಮಿಶ್ರಾ ಇಬ್ಬರೂ ತಮ್ಮ ಅಧಿಕಾರಾವಧಿಯಲ್ಲಿ ಪ್ರಾಶಸ್ತ್ಯದ ಕೋಷ್ಟಕದಲ್ಲಿ ಕ್ಯಾಬಿನೆಟ್ ಸಚಿವರ ಶ್ರೇಣಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಇವಿಎಂ ಬಳಸಿ ಭಾರತ ಯಶಸ್ವಿಯಾಗಿ ಚುನಾವಣೆ ನಡೆಸಿದೆ: ಪಾಕ್ ಸಂಸತ್ತಿನಲ್ಲಿ ಮೆಚ್ಚುಗೆ ಮಾತು