ನಾಗ್ಪುರ: ಐದನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸತತ ನಾಲ್ಕು ಬಾರಿ ಅರ್ಧ ಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್, ಕೊಹ್ಲಿ ಜೊತೆ ರಹಾನೆ ಸ್ಥಾನ ಹಂಚಿಕೊಂಡಿದ್ದಾರೆ.
ಭಾನುವಾರ ನಾಗ್ಪುರದ ವಿದರ್ಭ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಸರಣಿಯ 5ನೇ ಏಕದಿನ ಪಂದ್ಯದಲ್ಲಿ ರಹಾನೆ 61 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಈ ಹಿಂದೆ ವೆಸ್ಟ್ ಇಂಡಿಸ್ ಪ್ರವಾಸದ ಸಮಯದಲ್ಲೂ ರಹಾನೆ ಸತತ 4 ಅರ್ಧಶತಕ ಬಾರಿಸಿದ್ದರು. ಈಗ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲೂ 4 ಅರ್ಧಶತಕ ಹೊಡೆಯುವ ಮೂಲಕ ಸುದ್ದಿಯಾಗಿದ್ದಾರೆ.
ಯಾವ ಪಂದ್ಯದಲ್ಲಿ ಎಷ್ಟು?
ಇಂದೋರ್ 70 ರನ್, ಕೋಲ್ಕತ್ತಾದಲ್ಲಿ 55 ರನ್ ಸಿಡಿಸಿದ್ದ ರಹಾನೆ ಬೆಂಗಳೂರು ಪಂದ್ಯದಲ್ಲಿ 53 ರನ್ ಹೊಡೆದಿದ್ದರು.