ರಾಷ್ಟ್ರ ಭಾಷಾ ವಿಚಾರವಾಗಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಮಧ್ಯೆ ಟ್ವಿಟ್ ವಾರ್ ನಡೆದಿತ್ತು. ಹಿಂದಿ ರಾಷ್ಟ್ರ ಭಾಷೆ ಎಂದು ಒಪ್ಪಲು ಸಾಧ್ಯವೇ ಇಲ್ಲ, ಕನ್ನಡವೇ ನಮ್ಮ ಭಾಷೆ ಎಂದು ಸುದೀಪ್ ಹೇಳಿಕೆ ನೀಡಿದ್ದರು. ಇದರ ಬೆನ್ನೆಲ್ಲೆ ಅಜಯ್ ದೇವಗನ್, ಹಾಗಾದರೆ, ಹಿಂದಿಗೆ ಡಬ್ ಮಾಡಿ ಸಿನಿಮಾವನ್ನು ಯಾಕೆ ಬಿಡುಗಡೆ ಮಾಡುತ್ತೀರಿ ಎಂದು ಟಾಂಗ್ ಕೊಟ್ಟಿದ್ದರು. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್
ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಟ್ವಿಟ್ ವಾರ್ ನಾನಾ ತಿರುವುಗಳನ್ನು ಪಡೆದುಕೊಂಡಿತು. ನಂತರ ಇದೊಂದು ಅರೆ ತಿಳುವಳಿಕೆಯಿಂದ ಆದ ಪ್ರಮಾದ ಎನ್ನುವಂತೆ ಅಜಯ್ ದೇವಗನ್ ತಿಪ್ಪೆ ಸಾರಿಸುವುದರ ಮೂಲಕ ವಿವಾದಕ್ಕೆ ಸುಖಾಂತ್ಯ ಮಾಡಿದರೆ, ಆದರೂ, ಈ ಕಿಚ್ಚು ಅಲ್ಲಿಗೆ ನಿಲ್ಲಲಿಲ್ಲ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ
ಕಿಚ್ಚ ಸುದೀಪ್ ಅವರ ನಟನೆಯ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಹೇಳಲಾಯಿತು. ಅಧಿಕೃತವಾಗಿ ಡೇಟ್ ಕೂಡ ಅನೌನ್ಸ್ ಮಾಡಿದರು ನಿರ್ಮಾಪಕರು. ಅದೇ ವೇಳೆಯಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರ ಕೂಡ ರಿಲೀಸ್ ಆಗಲಿದೆ ಎಂದು ಹೇಳಲಾಯಿತು. ಕಿಚ್ಚ ಮತ್ತು ಅಜಯ್ ಮತ್ತೊಂದು ಸುತ್ತಿನ ಪೈಪೋಟಿಗೆ ಇಳಿಯಲಿದ್ದಾರೆ ಎಂದು ಬಿಂಬಿಸಲಾಯಿತು. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು
ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಆ ದಿನ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾ ಬಿಡುಗಡೆ ಆಗುವುದಿಲ್ಲವಂತೆ. ಸಿನಿಮಾಗಳ ನಡುವೆ ಪೈಪೋಟಿ ಬೇಡವೆಂದು ಈ ಸಿನಿಮಾದ ದಿನಾಂಕವನ್ನು ಬದಲಿಸುತ್ತಿದೆಯಂತೆ ಚಿತ್ರತಂಡ. ಹಾಗಾಗಿ ಜುಲೈ 28 ರಂದು ಕೇವಲ ವಿಕ್ರಾಂತ್ ರೋಣ ಮಾತ್ರ ಬಿಡುಗಡೆ ಆಗುತ್ತಿದೆ ಎನ್ನಲಾಗುತ್ತಿದೆ.