ಟಿವಿ ಪರದೆಯ ಬಿಗ್ ಬಾಸ್ ಸಾಕಷ್ಟು ವಿಷ್ಯವಾಗಿ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 9 (Bigg Boss Kannada Season 9) ಶುರುವಾಗಿ ಕೇವಲ ಒಂದು ವಾರವಷ್ಟೇ ಕಳೆದಿದೆ. ವಾರ ಕಳೆದಂತೆ ದೊಡ್ಮನೆಯಿಂದ ಯಾರು ಹೊರ ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಮೊದಲ ವಾರ ಬಿಗ್ ಬಾಸ್ ಮನೆಯಿಂದ ಬೈಕ್ ರೇಸರ್ ಐಶ್ವರ್ಯ ಪಿಸ್ಸೆ (Aishwarya Pissay) ಔಟ್ ಆಗಿದ್ದಾರೆ.
ಈ ವಾರ ಬೈಕ್ ರೇಸರ್ ಐಶ್ವರ್ಯಾ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ವೋಟ್ ಕಡಿಮೆ ಬಂದ ಹಿನ್ನೆಲೆ ಐಶ್ವರ್ಯ ಮನೆಯಿಂದ ಹೊರ ಹೋಗಿದ್ದಾರೆ. ಇದನ್ನೂ ಓದಿ: BREAKING: ಹೆಣ್ಣು ಮಗುವಿಗೆ ತಂದೆಯಾದ ಧ್ರುವ ಸರ್ಜಾ
ಬೆಂಗಳೂರು ಮೂಲದ ಐಶ್ವರ್ಯಾ ಅವರು ಮೋಟಾರ್ ಸ್ಪೋರ್ಟ್ಸ್ ಮಹಿಳಾ ಕ್ಯಾಟಗರಿಯಲ್ಲಿ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಕೂಡ ಪಡೆದಿದ್ದಾರೆ. ಇದನ್ನೂ ಓದಿ: ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್