ಬೆಂಗಳೂರು: ಏರ್‌ಪೋರ್ಟ್‌ಗಳಲ್ಲಿ ಬೇರೆ ಧರ್ಮದವರಿಗೆ ಪ್ರಾರ್ಥನೆ ಮಾಡಲು ಪ್ರತ್ಯೇಕ ಕೊಠಡಿ ಕೊಡುವುದು ಒಳ್ಳೆಯದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ಏರ್‌ಪೋರ್ಟ್‌ನಲ್ಲಿ ನಮಾಜ್ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹದ್ದಕ್ಕೆ ಕಾಯ್ದೆ ತರೋದು ಬೇರೆ. ಹಲವಾರು ದೇಶಗಳಲ್ಲಿ ಬೇರೆ ಧರ್ಮದವರು ಪಾರ್ಥನೆ ಮಾಡೋಕೆ ಪ್ರತ್ಯೇಕ ಕೊಠಡಿಯನ್ನ ಕೊಡ್ತಾರೆ. ಅವರವರ ಧರ್ಮದ ಪಾರ್ಥನೆ ಮಾಡಲು ಕೊಡ್ತಾರೆ. ಸಾರ್ವಜನಿಕವಾಗಿ ಅಂತಹ ಕಡೆ ಕೊಡೋದಕ್ಕಿಂತ ಒಂದು ಕೊಠಡಿ ಕೊಡೋದು ಸರಿ ಎಂದರು.ಇದನ್ನೂ ಓದಿ: ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಉಗ್ರರ ಬಗ್ಗೆ ಏನ್ ಚರ್ಚೆ ಮಾಡ್ತೀರಾ? – HDK ಕಿಡಿ
ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಅನೇಕ ದೇಶಗಳಿಂದ ಅನೇಕ ಧರ್ಮದ ಜನರು ಬರುತ್ತಾರೆ. ಇಂತಹ ವಿಷಯದಲ್ಲಿ ಸಣ್ಣತನ ತೋರಿಸಬಾರದು. ಒಂದು ಕೊಠಡಿ ಮೀಸಲು ಇಟ್ಟರೆ ಅವರ ಧರ್ಮ ಪಾಲನೆ ಮಾಡ್ತಾರೆ. ಆರ್‌ಎಸ್‌ಎಸ್ ಬಗ್ಗೆ ಮಾತಾಡೋದು ಅವಶ್ಯಕತೆ ಇಲ್ಲ. ಇದಕ್ಕೆಲ್ಲ ಒಂದು ವ್ಯವಸ್ಥೆಯನ್ನ ಸಾರ್ವಜನಿಕರಿಗೆ ಸಮಸ್ಯೆ, ಅನಾನುಕೂಲ ಆಗದೇ ಇರುವ ರೀತಿಯಲ್ಲಿ ತೀರ್ಮಾನ ಆದರೆ ಎಲ್ಲರು ಮೆಚ್ಚುತ್ತಾರೆ ಎಂದು ಹೇಳಿದರು.

