ವಾಷಿಂಗ್ಟನ್: ಏರ್‌ಪೋರ್ಟ್‍ನಲ್ಲಿ (Airport) ನಡೆದ ಏರ್ ಶೋನಲ್ಲಿ (Airshow) ಪರಸ್ಪರ 2 ವಿಮಾನಗಳು (Fighter Plane) ಡಿಕ್ಕಿ ಹೊಡೆದು ಸ್ಪೋಟಗೊಂಡು 6 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್‍ನಲ್ಲಿ ನಡೆದಿದೆ.
ಏರ್ ಶೋ ಪ್ರದರ್ಶನದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ 2 ವಿಮಾನಗಳು ಸ್ಫೋಟಗೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏರ್ ಶೋದಲ್ಲಿ ಭಾಗವಹಿಸಿರುವ ಜನರು ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ.
Advertisement
OMG – two planes collided at ‘Wings Over Dallas’ air show today
This is crazy
— James T. Yoder (@JamesYoder) November 12, 2022
Advertisement
2 ವಿಮಾನಗಳಾದ ಬಿ -17 ಬೊಂಬರ್ ಹಾಗೂ ಬೆಲ್ ಪಿ-63 ಕಿಂಗ್ ಕೋಬ್ರಾ ವಿಮಾನಗಳು ಏರ್ ಶೋನಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಬಿ – 17 ಬೊಂಬರ್ ವಿಮಾನಕ್ಕೆ ಬೆಲ್ ಪಿ -63 ವಿಮಾನ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಈ ವೇಳೆ ವಿಮಾನವೆರಡಕ್ಕೂ ಬೆಂಕಿ ಹೊತ್ತಿಕೊಂಡು ಛಿದ್ರವಾಗಿದೆ. ಈ ವೇಳೆ ನಡೆದ ಘರ್ಷಣೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ
Advertisement
As many of you have now seen, we have had a terrible tragedy in our city today during an airshow. Many details remain unknown or unconfirmed at this time. The @NTSB has taken command of the crash scene with @DallasPD and @DallasFireRes_q continuing to provide support.
— Mayor Eric Johnson (@Johnson4Dallas) November 12, 2022
Advertisement
ಘಟನೆ ಬಳಿಕ ತುರ್ತು ಘಟಕ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಯುದ್ಧವಿಮಾನ ಅವಘಡಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಎರಡು ವಿಮಾನಗಳು ಯುದ್ಧ ಕಾಲದ ವಿಮಾನಗಳಾಗಿತ್ತು. ಇದನ್ನೂ ಓದಿ: ಹೈಕೋರ್ಟ್ ಚಾಟಿ ಬೆನ್ನಲ್ಲೇ ಸಭೆ- ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?