ಟೆಂಪೋಗೆ ಡಿಕ್ಕಿ ಹೊಡೆದ ಐರಾವತ ಬಸ್ – ಮೂವರಿಗೆ ಗಂಭೀರ ಗಾಯ

ಕಾರವಾರ: ಟೆಂಪೋ (Tempo) ಮತ್ತು ಐರಾವತ (Airavata) ಬಸ್ (Bus) ನಡುವೆ ಡಿಕ್ಕಿಯಾದ ಪರಿಣಾಮ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ (Uttara Kannada), ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಭಟ್ಕಳ ತಾಲೂಕಿನ ಶಿರಾಲಿ ಬಳಿ ನಡೆದಿದೆ.
ಕಾರವಾರದಿಂದ ಮಂಗಳೂರು ಕಡೆ ಹೊರಟಿದ್ದ ಐರಾವತ ಬಸ್ ಟೆಂಪೋ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಬಸ್‍ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಸ್‍ನ ಮುಂಭಾಗದ ಸೀಟ್‍ನಲ್ಲಿ ಕುಳಿತ ಮೂವರಿಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ಮತ್ತೆ ಸಿಪಿವೈ Vs ಎಚ್‌ಡಿಕೆ – ಕಲ್ಲು, ಮೊಟ್ಟೆ ಎಸೆತ, ಲಾಠಿ ಚಾರ್ಜ್, ಜೆಡಿಎಸ್ ಕಾರ್ಯಕರ್ತರು ವಶಕ್ಕೆ
ಗಾಯಾಳುಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ
Live Tv