ಮಡಿಕೇರಿ: ಮಾಹಾಮಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಂಖ್ಯೆ ವಿರಳವಾಗಿದೆ. ವಿವಿಧ ಭಾಗಗಳಿಗೆ ತೆರಳುವ ಬಸ್‍ಗಳನ್ನು ನಿಲ್ಲಿಸಲಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರು-ಮೈಸೂರುಗೆ ತೆರಳುವ ಐರಾವತ ಬಸ್ಸಿನಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ಐರಾವತ ಬಸ್ಸಿನಲ್ಲಿ ಹೆಚ್ಚಾಗಿ ದೇಶ-ವಿದೇಶಗಳ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಇದೀಗ ಶೇ. 30ರಷ್ಟು ಮಾತ್ರ ಪ್ರಯಾಣಿಕರು ಕಂಡು ಬರುತ್ತಿದ್ದು, ಯಾರಾದರೂ ಬಸ್ಸಿನಲ್ಲಿ ಕೆಮ್ಮಿದ್ರು ಬಸ್ ಚಾಲಕರಿಗೆ ಹಾಗೂ ನಿರ್ವಹಕರಿಗೆ ಭಯವಾಗುತ್ತದೆ. ಅಲ್ಲದೆ ಹಿಂದೆ ಕುಳಿತ್ತಿರುವ ಪ್ರಯಾಣಿಕರು ಯಾರಾದ್ರೂ ಕೆಮ್ಮಿದ್ರೆ ಮುಂದೆ ಸೀಟ್ ಬಳಿ ಬಂದು ಕುಳಿತುಕೊಳ್ಳುತ್ತಾರೆ.
Advertisement
Advertisement
ಸಾಮಾನ್ಯವಾಗಿ ಐರಾವತ ಬಸ್ಸಿನಲ್ಲಿ ವಿದೇಶಿಗರೇ ಹೆಚ್ಚು ಕೊಡಗಿಗೆ ಬರುತ್ತಾರೆ. ಪ್ರವಾಸಿತಾಣಗಳನ್ನು ವೀಕ್ಷಿಸಲು ಇದೀಗ ಈ ಕೊರೊನಾ ವೈರಸ್‍ನ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರು, ಆತಂಕ ಮಾತ್ರ ನಮಗೆ ದೂರವಾಗುತ್ತಿಲ್ಲ. ಸಾರಿಗೆ ಇಲಾಖೆ ಮಾಸ್ಕ್ ಮಾತ್ರ ಐರಾವತ, ರಾಜಹಂಸ ಬಸ್ ಚಾಲಕರಿಗೆ ನೀಡಿದ್ದಾರೆ. ಇತರೆ ಸಿಬ್ಬಂದಿಗಳಿಗೆ ನೀಡಿಲ್ಲ ಎಂದು ಕೆಲ ಬಸ್ಸಿನ ಸಿಬ್ಬಂದಿ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.