1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

Public TV
1 Min Read
AIR SHOW FIRE copy

ಬೆಂಗಳೂರು: ಏರೋ ಇಂಡಿಯಾ 2019ರ ಏರ್ ಶೋ ಅಗ್ನಿ ಅವಘಡ ಸಂಭವಿಸಿದ್ದು, ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ಬಂದಿದೆ. ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಾರ್ವಜನಿಕರಿಗೆ ಸ್ಥಳಕ್ಕೆ ಅವಕಾಶ ನೀಡಲಾಗುವುದು ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಏರ್ ಶೋ ನಡೆಯುತ್ತಿರುವ ಕಾರಣ ಸ್ಥಳದಲ್ಲಿ 1 ಸಾವಿರ ಕಾರುಗಳು ಪಾರ್ಕ್ ಮಾಡಲಾಗಿತ್ತು. ಶೋಗೆ ಹೆಚ್ಚಿನ ಜನರು ಆಗಮಿಸಿದ ಕಾರಣ ಕಾರುಗಳನ್ನು ಮೈದಾನದಂತಹ ಪ್ರದೇಶದಲ್ಲಿ ತಾತ್ಕಾಲಿವಾಗಿ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಥಳದಲ್ಲಿ ಹುಲ್ಲು ಹೆಚ್ಚಾಗಿರುವುದರಿಂದ ಗಾಳಿಗೆ ಬೆಂಕಿ ಬಹುಬೇಗ ಹರಡಿದೆ. ಪರಿಣಾಮ 300ಕ್ಕೂ ಹೆಚ್ಚು ಕಾರುಗಳು ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

ವಾಹನ ಮಾಲೀಕರಿಗೆ ಸ್ಥಳಕ್ಕೆ ತೆರಳಲು ಅವಕಾಶ ನೀಡಿಲ್ಲ. ಬೆಂಕಿ ಹೆಚ್ಚಾಗಲು ಕಾರಣ ಏನೆಂಬುವುದನ್ನು ತಿಳಿಯಲು ಸ್ಥಳ ಪರಿಶೀಲನೆ ನಡೆಸುವ ಅಗತ್ಯವಿದೆ. ಆದ್ದರಿಂದ ಸ್ಥಳಕ್ಕೆ ತೆರಳಲು ಅವಕಾಶ ನೀಡಿಲ್ಲ. ಸಂಪೂರ್ಣವಾಗಿ ಬೆಂಕಿಯನ್ನು ಹತೋಟಿಗೆ ತೆಗೆದುಕೊಂಡ ಬಳಿಕ ಎಲ್ಲರಿಗೂ ಅವಕಾಶ ನೀಡಲಾಗುವುದು.

ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಮೇಲೆ ಬ್ಲಾಸ್ಟ್ ಕೂಡ ಸಂಭವಿಸಿದೆ. ಆದ್ದರಿಂದಲೇ ಮತ್ತಷ್ಟು ಬೆಂಕಿಯ ಜ್ವಾಲೆ ಹೆಚ್ಚಾಯಿತು. ತಾತ್ಕಾಲಿಕವಾಗಿ ಏರ್ ಶೋ ಪ್ರದರ್ಶನಕ್ಕೆ ತಡೆ ನೀಡಲಾಗಿದೆ. ಪರಿಸ್ಥಿತಿ ಹತೋಟಿ ತೆಗೆದುಕೊಳ್ಳುವ ಕಾರ್ಯ ಮುಂದುವರಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದರು.

https://twitter.com/KarFireDept/status/1099226119255945216

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *