ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಗಾಳಿ ಗುಣಮಟ್ಟ (Air Quality) ಕಳವಳಕಾರಿ ರೀತಿಯಲ್ಲಿ ಹದಗೆಟ್ಟಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯ ಎಲ್ಲಾ ಪ್ರಾಥಮಿಕ ಶಾಲೆಗಳನ್ನು (Primary Schools) ನವೆಂಬರ್ 10 ರವರೆಗೆ ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ದೆಹಲಿ ಶಿಕ್ಷಣ ಸಚಿವೆ ಹಾಗೂ ಆಪ್ ನಾಯಕಿ ಅತಿಶಿ ಭಾನುವಾರ ಎಕ್ಸ್‌ನಲ್ಲಿ ಘೋಷಿಸಿದ್ದಾರೆ. 6 ರಿಂದ 12 ಗ್ರೇಡ್‌ನ ಶಾಲೆಗಳಿಗೆ ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಆಯ್ಕೆಯನ್ನು ನೀಡಲಾಗುತ್ತಿದೆ ಎಂದು ಅತಿಶಿ ತಿಳಿಸಿದ್ದಾರೆ.
Advertisement
Advertisement
ಇದಕ್ಕೂ ಮೊದಲು ದೆಹಲಿ ಸರ್ಕಾರ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 2 ರವರೆಗೆ ಮುಚ್ಚಲು ಆದೇಶಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ್ ಎಕ್ಸ್‌ನಲ್ಲಿ ಬರೆದಿದ್ದು, ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದರು. ಇದನ್ನೂ ಓದಿ: ನಾಪತ್ತೆಯಾಗಿರೋ 3 ಬೀದಿ ನಾಯಿಗಳಿಗಾಗಿ ತೀವ್ರ ಹುಡುಕಾಟ – ಹುಡುಕಿ ಕೊಟ್ಟವರಿಗೆ 35 ಸಾವಿರ ಬಹುಮಾನ!
Advertisement
ಶುಕ್ರವಾರದಂದು ದೆಹಲಿಯ ಗಾಳಿಯ ಗುಣಮಟ್ಟ ‘ತೀವ್ರ’ ವರ್ಗಕ್ಕೆ ಕುಸಿದಿದೆ. ಅಂದಿನಿಂದ ನಗರದಲ್ಲಿ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆಯ ಲಕ್ಷಣಗಳು ಕಾಣಿಸಿಲ್ಲ. ಭಾನುವಾರ ಬೆಳಗ್ಗೆ 7 ಗಂಟೆಗೆ ರಾಷ್ಟ್ರ ರಾಜಧಾನಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 460 ದಾಖಲಿಸಿದೆ. ಇದು ‘ತೀವ್ರ’ ವಿಭಾಗಕ್ಕೆ ಸೇರುತ್ತದೆ. ಶನಿವಾರ ದೆಹಲಿಯ ಸರಾಸರಿ ಎಕ್ಯುಐ 415 ಇತ್ತು.
Advertisement
ರಾಷ್ಟ್ರ ರಾಜಧಾನಿ ಪ್ರದೇಶದ (NCR) ಭಾಗವಾಗಿರುವ ದೆಹಲಿಯ ನೆರೆಯ ನಗರಗಳಾದ ನೋಯ್ಡಾ ಮತ್ತು ಗುರುಗ್ರಾಮದಲ್ಲಿಯೂ ಕೂಡ ಶುಕ್ರವಾರದಿಂದ ಗಾಳಿಯ ಗುಣಮಟ್ಟ ‘ತೀವ್ರ’ ವರ್ಗಗೆ ಸೇರಿದೆ. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆಗೆ ತಾಳಿ, ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು – ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು