ನವದೆಹಲಿ: ಇರಾನ್ – ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ದೆಹಲಿ-ಟೆಲ್ ಅವಿವ್ ಮಾರ್ಗದ ಏರ್ ಇಂಡಿಯಾ (Air India) ವಿಮಾನ ಹಾರಾಟವನ್ನು ಮೇ 31 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಮುಖ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಎಲ್ ಅಲ್, ಇಸ್ರಾಏರ್, ಅರ್ಕಿಯಾ ಮತ್ತು ಏರ್ ಹೈಫಾದಂತಹ ಇಸ್ರೇಲ್ (Israel) ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ವಿಮಾನಗಳ ಸ್ಥಗಿತದಿಂದ ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳಿಗಾಗಿ ಭಾರತಕ್ಕೆ ಪ್ರಯಾಣಿಸಲು ತೊಂದರೆಯಾಗಿದೆ. ಅಲ್ಲದೇ ಉದ್ವಿಗ್ನತೆಯಿಂದ ಪಾರಾಗಲು ಇಸ್ರೇಲ್‌ನಲ್ಲಿ ವಾಸಿಸುವ 40,000 ಕ್ಕೂ ಹೆಚ್ಚು ಭಾರತೀಯರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಫೈಟರ್ ಜೆಟ್‌ನಿಂದ ಬಿದ್ದ ಪೈಲಟ್‌ನನ್ನು ಅಮೆರಿಕ ನಿಖರವಾಗಿ ಇರಾನ್ ನೆಲದಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದು ಹೇಗೆ?
ಇಸ್ರೇಲ್‌ನಿಂದ ಹೊರಡಲು ಬಯಸುವ ಭಾರತೀಯರು ಜೋರ್ಡಾನ್ ಅಥವಾ ಈಜಿಪ್ಟ್ ಮೂಲಕ ಹೋಗಬೇಕಾಗುತ್ತದೆ. ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿವಿಧ ಮಾರ್ಗಗಳ ಮೂಲಕ ಪ್ರಯಾಣಿಸಲು ಬಯಸುವವರಿಗೆ ಸಹಾಯ ಮಾಡುತ್ತಿದೆ. ಇದಕ್ಕಾಗಿ 24/7 ಸಹಾಯವಾಣಿ ತೆರೆಯಲಾಗಿದೆ. ಇದನ್ನೂ ಓದಿ: ಇರಾನ್ ನೆಲದಲ್ಲಿ ತನ್ನ 927 ಕೋಟಿಯ 2 ವಿಮಾನಗಳನ್ನು ಸುಟ್ಟು ಹಾಕಿದ ಅಮೆರಿಕ

