ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 200ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಅವುಗಳಲ್ಲಿ ಶೇ.70 ರಷ್ಟು ಸಣ್ಣ ದೇಹವುಳ್ಳ ವಿಮಾನಗಳನ್ನು ಖರೀದಿಸಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ಏರ್‌ಬಸ್ ಎ350 ಅಗಲ ದೇಹದ ಏರ್‌ಕ್ರಾಫ್ಟ್ ಖರೀದಿಗೆ ಏರ್‌ಇಂಡಿಯಾ ಯೋಜನೆ ನಡೆಸಿದ್ದರೂ ಇಲ್ಲಿಯವರೆಗೆ ಖರೀದಿಸಲಾಗಿಲ್ಲ. ಇದೀಗ ಚಿಕ್ಕ ಗಾತ್ರದ ವಿಮಾನಗಳನ್ನು ಕೊಳ್ಳಲು ಏರ್ ಇಂಡಿಯಾ ವಿಮಾನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿವೆ. ಇದನ್ನೂ ಓದಿ: ಮತದಾನಕ್ಕೆ ಅನುಮತಿ ನೀಡಿ- ಸುಪ್ರೀಂ ಮೊರೆ ಹೋದ ಮಲಿಕ್, ದೇಶಮುಖ್
Advertisement
Advertisement
ಏರ್ ಇಂಡಿಯಾ 2006ರಲ್ಲಿ ಕೊನೆಯದಾಗಿ 111 ವಿಮಾನಗಳನ್ನು ಖರೀದಿಸಿತ್ತು. ಅಮೆರಿಕ ಮೂಲದ ಬೋಯಿಂಗ್ ಕಂಪನಿಯಿಂದ 86 ವಿಮಾನಗಳು ಹಾಗೂ ಏರ್‌ಬಸ್‌ನಿಂದ 43 ವಿಮಾನಗಳನ್ನು ಖರೀದಿಸಿತ್ತು. ಇದೀಗ 16 ವರ್ಷಗಳ ಬಳಿಕ ಮೊದಲ ಬಾರಿ ವಿಮಾನಗಳನ್ನು ಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್
Advertisement
ಕಳೆದ ವರ್ಷ ಅಕ್ಟೋಬರ್ 8 ರಂದು ಏರ್‌ಲೈನ್ಸ್ ಬಿಡ್ ಅನ್ನು ಟಾಟಾ ಗ್ರೂಪ್ ಯಶಸ್ವಿಯಾಗಿ ಗೆದ್ದು, ಈ ವರ್ಷ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದೀಗ 200 ಹೊಸ ವಿಮಾನಗಳನ್ನು ಕೊಳ್ಳಲು ಮುಂದಾಗಿದ್ದು, ಅದರಲ್ಲಿ ಶೇ.70 ರಷ್ಟು ಚಿಕ್ಕ ವಿಮಾನಗಳು ಹಾಗೂ ಶೇ.30 ರಷ್ಟು ದೊಡ್ಡ ವಿಮಾನಗಳನ್ನು ಕೊಳ್ಳುವುದಾಗಿ ತಿಳಿಸಿದೆ.