ಬೆಂಗಳೂರು: ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಹಾರಾಟ ಮಾಡಲಾಗದೇ 3 ಗಂಟೆಗಳ ಕಾಲ ರನ್‍ವೇನಲ್ಲೇ ಲಾಕ್ ಆದ ಘಟನೆ ಇಂದು ನಡೆದಿದೆ.
ಬೆಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಬೆಳಗ್ಗೆ 10.35 ಗಂಟೆಯಿಂದ 1.30 ಗಂಟೆವರೆಗೆ ರನ್‍ವೇನಲ್ಲೇ ನಿಂತಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಹಾರಾಟ ಮಾಡಲಾಗದೆ. ವಿಮಾನ ರನ್‍ವೇನಲ್ಲೆ ಲಾಕ್ ಆಗಿ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ವ್ಹೀಲಿಂಗ್ ಮಾಡುತ್ತಾ ಯುವಕರ ಪುಂಡಾಟ-ನೆಲಮಂಗಲ ಫ್ಲೈಓವರ್‌ನಲ್ಲಿ ಮೋಜು ಮಸ್ತಿ
ಪ್ರಯಾಣಿಕರು ವಿಮಾನದಲ್ಲಿನ ತಾಂತ್ರೀಕ ದೋಷದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಡಿಜಿಸಿಐ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲು ಅನುಮತಿ ಸಿಕ್ಕ ಬಳಿಕ ಬಸ್ ಮೂಲಕ ರನ್‍ವೇಯಿಂದ ಪ್ರಯಾಣಿಕರನ್ನು ವಾಪಸ್ ಕರೆತರಲಾಯಿತು. ಈ ಸಮಸ್ಯೆ 3 ಗಂಟೆ ಬಳಿಕ ಪರಿಹಾರ ಕಂಡಿತು. ಬಳಿಕ ದೆಹಲಿಗೆ ತೆರಳಲು ಸಂಜೆ 5.15ಕ್ಕೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಿಕೊಡಲಾಗಿದೆ. ಇದನ್ನೂ ಓದಿ: ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ