– ವಿಮಾನದಲ್ಲಿದ್ರು 140 ಪ್ರಯಾಣಿಕರು
ಚೆನ್ನೈ: ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ (Air India Flight) ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ತಮಿಳುನಾಡಿನ (Tamil Nadu) ತಿರುಚ್ಚಿ ನಗರದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಆಕಾಶದಲ್ಲೇ ಗಿರಕಿ ಹೊಡೆದಿರುವ ಘಟನೆ ನಡೆದಿದೆ.
141 ಪ್ರಯಾಣಿಕರಿದ್ದ ವಿಮಾನವು ತಿರುಚ್ಚಿ ವಿಮಾನ ನಿಲ್ದಾಣದಿಂದ ಸಂಜೆ 5:45 ಕ್ಕೆ ಟೇಕಾಫ್ ಆದ ನಂತರ ಲ್ಯಾಂಡಿಂಗ್ ಗೇರ್ ಸಮಸ್ಯೆಯನ್ನು ಎದುರಿಸಿತು. ಕೊನೆಗೆ ತಮಿಳುನಾಡಿನ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇಫ್ ಆಗಿ ಲ್ಯಾಂಡಿಂಗ್ ಆಗಿದೆ. ಇದನ್ನೂ ಓದಿ: ಕೋರಮಂಗಲದಲ್ಲಿ ರಿಲಯನ್ಸ್ ರಿಟೇಲ್ ‘ಯೂಸ್ಟಾ’ ಸ್ಟೋರ್ ಓಪನ್ – ಯುವಜನರ ಫ್ಯಾಷನ್ ಬ್ರ್ಯಾಂಡ್
ಶಾರ್ಜಾಕ್ಕೆ ಹೊರಟಿದ್ದ AXB 613 ವಿಮಾನವು ತಿರುಚಿರಾಪಳ್ಳಿಯಿಂದ ಟೇಕ್ ಆಫ್ ಆದ ಕೂಡಲೇ ಹೈಡ್ರಾಲಿಕ್ ವೈಫಲ್ಯವನ್ನು ವರದಿ ಮಾಡಿತ್ತು. ವಿಮಾನದಲ್ಲಿ 144 ಪ್ರಯಾಣಿಕರಿದ್ದರು.
ವಿಮಾನವು ಇಂಧನವನ್ನು ಬರ್ನ್ ಮಾಡಲು ಇನ್ನೂ ತಿರುಚಿರಾಪಳ್ಳಿಯ ಸುತ್ತಲೂ ಸುತ್ತುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್ ಪ್ರಕಾರ, ವಿಮಾನವು ಸುಮಾರು ಎರಡು ಗಂಟೆಗಳ ಕಾಲ ಒಂದೇ ಪ್ರದೇಶದಲ್ಲಿ ಸುತ್ತಾಡಿದೆ. ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು ಕಾಶ್ಮೀರದಲ್ಲಿ ಎನ್‌ಸಿ ಕೈ ಹಿಡಿದ ಆಪ್!