ನವದೆಹಲಿ: ವೆಜ್ ಸೇವಿಸುವ ಪ್ರಯಾಣಿಕರಿಗೆ, ನಾನ್-ವೆಜ್ ಊಟ ನೀಡಿದ ಇಬ್ಬರು ಸಿಬ್ಬಂದಿಯನ್ನು ಏರ್ ಇಂಡಿಯಾ ಅಮಾನತುಗೊಳಿಸಿದೆ.
ಸಸ್ಯಾಹಾರಿ ಪ್ರಯಾಣಿಕರಿಗೆ ತಪ್ಪಾಗಿ ಮಾಂಸಾಹಾರದ ಊಟ ನೀಡಿದ ಕಾರಣಕ್ಕಾಗಿ ಏರ್ ಇಂಡಿಯಾ ಮಾರ್ಚ್ 25 ರ ಟೋಕಿಯೊ-ದೆಹಲಿ ವಿಮಾನದ ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ರಾಜ್ಯದ ಹಕ್ಕುಗಳನ್ನು ದೋಚುತ್ತಿದ್ದಾರೆ: ಭಗವಂತ್ ಮಾನ್
Advertisement
Advertisement
ಪ್ರಯಾಣಿಕರು ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ತಪ್ಪಾಗಿ ಮಾಂಸಹಾರದ ಊಟ ನೀಡಲಾಗಿದೆ. ಮಾಂಸದ ಊಟ ಬಡಿಸಲಾಗಿದೆ ಎಂದು ಪ್ರಯಾಣಿಕರ ಗಮನಕ್ಕೆ ಬಂದ ನಂತರ ಅವರು ಸಿಬ್ಬಂದಿಗೆ ದೂರು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ವಿಮಾನಯಾನ ಸಂಸ್ಥೆಯು ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು, ಈ ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿ ಅವರನ್ನು ಏರ್ ಇಂಡಿಯಾ ಅಮಾನತುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.