ಏರ್ ಇಂಡಿಯಾದಿಂದ ಸಶಸ್ತ್ರ ಪಡೆ ಸಿಬ್ಬಂದಿಗೆ ಟಿಕೆಟ್‌ ಉಚಿತ ಮರುಹೊಂದಿಕೆ ಆಫರ್‌

Public TV
2 Min Read
air india flight bomb threat

ನವದೆಹಲಿ: ಟಿಕೆಟ್‌ ಬುಕಿಂಗ್ ಮಾಡಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಗೆ (Armed Forces) ಉಚಿತ ಮರುಹೊಂದಿಕೆ (Rescheduling) ಅಥವಾ ರದ್ದತಿಯ ಮೇಲೆ ಪೂರ್ಣ ಮರುಪಾವತಿ ನೀಡುವ ಆಫರ್‌ ಅನ್ನು ಏರ್ ಇಂಡಿಯಾ (Air India), ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನಯಾನ ಸಂಸ್ಥೆ ನೀಡಿದೆ.

ಪಾಕಿಸ್ತಾನ ಮತ್ತು ಪಿಒಕೆಯ 9 ಉಗ್ರರ ನೆಲೆಗಳ ಮೇಲೆ ʻಆಪರೇಷನ್‌ ಸಿಂಧೂರʼ (Operation Sindoor) ಹೆಸರಿನಲ್ಲಿ ಭಾರತದ ಸಶಸ್ತ್ರ ಪಡೆಗಳು ದಾಳಿ ನಡೆಸಿದ ಹಿನ್ನೆಲೆ ಏರ್‌ ಇಂಡಿಯಾ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಈ ಘೋಷಣೆ ಮಾಡಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್‌ – ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ

ಈ ದಾಳಿ ನಡೆಸಿದ ಹಿನ್ನೆಲೆ, ಕೆಲ ವಾಯು ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಇದರಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಆದ್ದರಿಂದ ವಿಮಾನಯಾನ ಸಂಸ್ಥೆ ಈ ನಿರ್ಧಾರ ಪ್ರಕಟಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಏರ್ ಇಂಡಿಯಾ, ಮೇ 31 ರವರೆಗೆ ಬುಕ್ ಮಾಡಲಾದ ರಕ್ಷಣಾ ಸಿಬ್ಬಂದಿಗೆ ಈ ಸೌಲಭ್ಯ ಮಾಡಿಕೊಡಲಾಗಿದೆ. ಸೈನಿಕರ ಸೇವೆಯನ್ನು ಬೆಂಬಲಿಸಲು ಟಿಕೆಟ್ ರದ್ದತಿಗೆ ಸಂಪೂರ್ಣ ಮರುಪಾವತಿಯನ್ನು ನೀಡುತ್ತಿದ್ದೇವೆ ಎಂದು ಏರ್ ಇಂಡಿಯಾ ತಿಳಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ಇದೇ ಪೋಸ್ಟ್ ಹಂಚಿಕೊಂಡಿದೆ.

18 ಏರ್‌ಪೋರ್ಟ್‌ಗಳ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ʻಆಪರೇಷನ್‌ ಸಿಂಧೂರʼ ಬೆನ್ನಲ್ಲೇ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ ಏರ್ ಮತ್ತು ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನ ನಿಲ್ದಾಣಗಳಿಗೆ ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ. ಒಟ್ಟು 18 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನ ರದ್ದುಗೊಳಿಸಲಾಗಿದೆ, ಈ ಪೈಕಿ ಶ್ರೀನಗರ, ಲೇಹ್, ಜಮ್ಮು, ಅಮೃತಸರ, ಪಠಾಣ್‌ಕೋಟ್, ಚಂಡೀಗಢ, ಜೋಧ್‌ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್‌ನಗರ ನಿಲ್ದಾಣಗಳೂ ಸೇರಿವೆ. ಒಟ್ಟಾರೆಯಾಗಿ ವಿವಿಧ ವಿಮಾನಯಾನ ಸಂಸ್ಥೆಗಳ 200ಕ್ಕೂ ಹೆಚ್ಚು ವಿಮಾನ ಹಾರಾಟವನ್ನ ರದ್ದುಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪೂಂಚ್‌ನಲ್ಲಿ ಪಾಕಿಸ್ತಾನ ಶೆಲ್‌ ದಾಳಿ – ಭಾರತೀಯ ಯೋಧ ಹುತಾತ್ಮ

Share This Article