ನವದೆಹಲಿ: ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದ ವಿಶ್ವ ಯೋಗದಿನ ಆಚರಿಸಲಾಗಿದ್ದು, ತಾವು ಇರುವ ವಾತಾವರಣದಲ್ಲಿಯೇ ಯೋಗಾಸಗಳನ್ನು ಮಾಡುವ ಮೂಲಕ ಜಗತ್ತಿನ ಜನರ ಗಮನ ಸೆಳೆದಿದ್ದಾರೆ.
#WATCH Indo-Tibetan Border Police personnel perform Surya Namaskar in cold desert of Ladakh at an altitude of 18,000 feet pic.twitter.com/ky3PmJUm0G
— ANI (@ANI) June 21, 2018
ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶಸದಲ್ಲಿ ಯೋಗಾಸ ಪ್ರದರ್ಶಿಸಿದ್ರು. ಅವರ ಫೋಟೋ ಕೆಳಗೆ “ಇದು ಉತ್ತಮ ಆರೋಗ್ಯ, ಸಂತೋಷ, ಸಾಮರಸ್ಯ ಮತ್ತು ಐಎಎಫ್ ಏರ್ ವಾರಿಯರ್ ಶಾಂತಿಯ ಸಂದೇಶ. ಆಕಾಶದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರು” ಎಂದು ಬರೆದು ಐಎಎಫ್ ಟ್ವೀಟ್ ಮಾಡಿದೆ.
Yoga at 15000 Feet : #YogaDay2018 – A unique message of good health, happiness, harmony & peace from the Airwarriors of IAF. The Instructors of Paratroopers Training School of the India Air Force practicing Yoga in the Blue Sky. (Wg Cdr KBS Samyal & Wg Cdr Gajanand Yadav). pic.twitter.com/WgdzmOsiLR
— Indian Air Force (@IAF_MCC) June 20, 2018
ವಿಶಾಖಪಟ್ಟಣದ ಬಂಗಾಳ ಕೊಲ್ಲಿಯಲ್ಲಿ ಪೂರ್ವ ನೌಕಾದಳದ ಕಮಾಂಡರ್ ಸಿಬ್ಬಂದಿ ಹಾಗೂ ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ (ಸಬ್ ಮೆರಿನ್) ಸಿಬ್ಬಂದಿ ಕೂಡ ವಿಶ್ವ ಯೋಗ ಭಾಗವಹಿಸಿದರು. ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ ಸಿಬ್ಬಂದಿ ಸಬ್‍ಮೆರಿನ್ ನಲ್ಲಿಯೇ ಯೋಗಾಸನ ಮಾಡಿದರು.
Eastern naval command staff perform yoga on board INS Jyothi in Bay of Bengal off Visakhapatnam. Eastern Naval Command's submarine staff also participated in #InternationalYogaDay2018. pic.twitter.com/M1tmfUZM6r
— ANI (@ANI) June 21, 2018