ನವದೆಹಲಿ: ಭಾರತೀಯ ವಾಯುಪಡೆಯು (Indian Air Force) ಚೀನಾ (China) ಮತ್ತು ಪಾಕಿಸ್ತಾನ (Pakistan) ಎರಡೂ ಗಡಿಗಳ ಮೇಲೆ ಏಕಕಾಲಕ್ಕೆ ಕಣ್ಗಾವಲಿರಿಸುವ ಸಾಮರ್ಥ್ಯವುಳ್ಳ 4 ಸರ್ವೇಕ್ಷಣಾ ಡ್ರೋನ್‌ಗಳನ್ನ ನಿಯೋಜಿಸಿದೆ. ಹೆರಾನ್ ಮಾರ್ಕ್-2 ಹೆಸರಿನ ಡ್ರೋಣ್ ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಗಸ್ತು ತಿರುಗುವ ಸಾಮರ್ಥ್ಯ ಹೊಂದಿದೆ.
ಗಡಿಯಲ್ಲಿ 4 ಹೆರಾನ್ ಮಾರ್ಕ್-2 ಡ್ರೋನ್‌ಗಳನ್ನು (Heron Mark-2 Drones) ನಿಯೋಜಿಸಲಾಗಿದೆ. ದೀರ್ಘ-ಶ್ರೇಣಿಯ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳ ವ್ಯವಸ್ಥೆ ಹೊಂದಿದೆ. ಜೊತೆಯಲ್ಲೇ ಹತ್ತಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಈ ಡ್ರೋನ್‌ಗಳಲ್ಲಿ ಇರಲಿವೆ. ಭಾರತದ ಉತ್ತರ ವಲಯದ ಗಡಿಯ ಮುಂಚೂಣಿ ಪ್ರದೇಶಗಳಲ್ಲಿ ಈ ಡ್ರೋನ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ
Advertisement
Advertisement
ಹೆರಾನ್ ಮಾರ್ಕ್-2 ವಿಶೇಷತೆ ಏನು?
ಈ ಡ್ರೋನ್‌ಗಳು ಉಪಗ್ರಹಗಳ ಜೊತೆಗೆ ಸಂವಹನ ಸಂಪರ್ಕ ಹೊಂದಿರುತ್ತವೆ. ಭಾರತೀಯ ವಾಯುಪಡೆಯು ಅತ್ಯಂತ ಸುದೀರ್ಘ ಸಮಯದಿಂದ ಈ ರೀತಿಯ ಡ್ರೋನ್‌ಗಳ ಅಗತ್ಯತೆಯನ್ನ ಪ್ರತಿಪಾದಿಸಿತ್ತು. ಈ ಡ್ರೋನ್‌ಗಳು ಅತಿ ದೂರದವರೆಗೆ ಇಂಧನ ಮರುಭರ್ತಿ ಇಲ್ಲದೇ ಸಂಚರಿಸಬಲ್ಲವು. ಒಮ್ಮೆ ಇಂಧನ ಭರ್ತಿಯಾದರೆ 36 ಗಂಟೆ ಕಾಲ ಕಾರ್ಯ ನಿರ್ವಹಿಸಬಲ್ಲವು. ಲೇಸರ್ ತಂತ್ರಜ್ಞಾನದ ಮೂಲಕ ಶತ್ರುಗಳ ನೆಲೆ ಗುರುತಿಸಬಲ್ಲವು. ಅತಿ ದೂರದಿಂದಲೇ ಶತ್ರುಗಳ ನೆಲೆಯನ್ನ ಗುರುತಿಸುವ ಸಾಮರ್ಥ್ಯ ಡ್ರೋನ್‌ಗಳಿಗೆ ಇರುವ ಕಾರಣ, ಇವುಗಳ ನೆರವಿನಿಂದ ವಾಯುಪಡೆಯ ಫೈಟರ್ ಜೆಟ್‌ಗಳು ಶತ್ರುಗಳ ನೆಲೆಗಳನ್ನು ದೂರಗಾಮಿ ಕ್ಷಿಪಣಿಗಳ ಮೂಲಕ ನಾಶಪಡಿಸಬಹುದಾಗಿದೆ ಎಂದು ವಾಯುಪಡೆ ತಿಳಿಸಿದೆ.
Advertisement
Advertisement
ಹೆರಾನ್ ಮಾರ್ಕ್-2 ಡ್ರೋನ್ ದೃಷ್ಟಿಯ ವ್ಯಾಪ್ತಿಯ ಆಚೆಗಿನ ಸರ್ವೇಕ್ಷಣೆಗೂ ನೆರವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇವುಗಳ ನೆರವಿನಿಂದ ಇಡೀ ದೇಶವನ್ನ ಒಂದೇ ಸ್ಥಳದಿಂದ ಸರ್ವೇಕ್ಷಣೆ ಮಾಡಲು ಸಾಧ್ಯ ಎಂದು ಡ್ರೋನ್ ಸ್ವಾಡರ್ನ್‌ನ ವಿಂಗ್ ಕಮಾಂಡರ್ ಪಂಕಜ್ ರಾಣಾ ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್; ಹಾಸ್ಟೆಲ್ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ
ದಿನದ 24 ಗಂಟೆಯೂ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳು ಯಾವುದೇ ಹವಾಮಾನದಲ್ಲೂ ಕೆಲಸ ಮಾಡುತ್ತವೆ. ಅದಕ್ಕಾಗಿ ಇವುಗಳ ಎಂಜಿನ್ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಒಂದೇ ಕಾರ್ಯಾಚರಣೆಗಳಲ್ಲಿ ಈ ಡ್ರೋನ್‌ಗಳು ಹಲವು ವಲಯಗಳ ಕಾರ್ಯಗಳನ್ನು ಸುದೀರ್ಘ ಕಾಲ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಬೇಹುಗಾರಿಕೆ, ಸರ್ವೇಕ್ಷಣೆ ಹಾಗೂ ಭಾರತೀಯ ವಾಯುಪಡೆಗೆ ಮಾಹಿತಿ ರವಾನಿಸುವ ಕಾರ್ಯಗಳನ್ನು ಈ ಡ್ರೋನ್ ಮಾಡುತ್ತದೆ ಎಂದು ರಾಣಾ ವಿವರಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಭಾರತೀಯ ವಾಯುಪಡೆ ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿದ್ದ ಮಿಗ್-21 ವಿಮಾನಗಳ ಬದಲಿಗೆ ಮೇಲ್ದರ್ಜೆಗೇರಿಸಿದ ಮಿಗ್-29 ಫೈಟರ್ ಜೆಟ್‌ಗಳನ್ನ ಗಸ್ತಿಗೆ ನಿಯೋಜನೆ ಮಾಡಿತ್ತು.
Web Stories