ಲಕ್ನೋ: ಗೋರಖ್‍ಪುರದಲ್ಲಿ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಅನ್ನು ಡಿಸೆಂಬರಲ್ಲಿ ಉದ್ಘಾಟಿಸಲಾಗುವುದು ಮತ್ತು 1990 ರಿಂದ ಮುಚ್ಚಿದ್ದ ರಸಗೊಬ್ಬರ ಕಾರ್ಖಾನೆಯನ್ನು ಪುನರಾರಂಭಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.
Advertisement
316 ಕೋಟಿ ರೂಪಾಯಿಗೂ ಅಧಿಕ ಮೊತ್ತದ 86 ಅಭಿವೃದ್ಧಿ ಯೋಜನೆಗಳ ಉದ್ಘಾಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ತಿಂಗಳು ಗೋರಖ್‍ಪುರದಲ್ಲಿ ಏಮ್ಸ್ ಉದ್ಘಾಟನೆ ನಡೆಯಲಿದೆ. 2004ರಿಂದ ಗೋರಖ್‍ಪುರದಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಇದೀಗ ಆ ಬೇಡಿಕೆ ಪೂರ್ಣಗೊಂಡಿದೆ ಎಂದರು. ಇದೇ ವೇಳೆ 1990ರಿಂದ ಮುಚ್ಚಲಾಗಿರುವ ರಸಗೊಬ್ಬರ ಕಾರ್ಖಾನೆಯನ್ನು ಮುಂದಿನ ತಿಂಗಳು ಪುನರಾರಂಭಿಸಲಾಗುವುದಾಗಿ ತಿಳಿಸಿದರು. ಇದನ್ನೂ ಓದಿ: ಮೃತ ವೃದ್ಧೆಯ ಹೆಬ್ಬೆಟ್ಟನ್ನು ಪೇಪರ್‌ಗೆ ಒತ್ತಿಸಿಕೊಂಡ ಪ್ರಕರಣ – ಎಫ್‍ಐಆರ್ ದಾಖಲು
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ರೀತಿಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅರ್ಪಿಸಲಿದ್ದಾರೆ. ಮೋದಿಯವರ ಆಡಳಿತದಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಾಗಿದೆ. ಸ್ವಾತಂತ್ರ್ಯದ ನಂತರ ರಾಜ್ಯದಲ್ಲಿ ಕೇವಲ 12 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಇಂದು ಸರ್ಕಾರ 33 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದರು. ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಪಕ್ಷಿಗಳಲ್ಲೂ ಡೈವೋರ್ಸ್!
Advertisement