ನವದೆಹಲಿ: ಒಡಿಶಾದ ಎರಡು ವರ್ಷದ ಸಯಾಮಿ ಅವಳಿಗಳಿಗೆ ದೆಹೆಲಿಯ ಆಲ್ ಇಂಡಿಯಾ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್) ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಹೌದು. ಅಪರೂಪದ ಪ್ರಕರಣದ ಇದಾಗಿದ್ದು, ಕಂಧಮಾಲ್ ಜಿಲ್ಲೆಯ ಅವಳಿ ಮಕ್ಕಳಾದ ಜಗನಾಥ್ ಮತ್ತು ಬಲರಾಮ್ ಸಯಾಮಿಗಳಿಗೆ ಚಿಕಿತ್ಸೆಗೆ ಏಮ್ಸ್ ವೈದ್ಯರು ಸಿದ್ಧತೆ ನಡೆಸುತ್ತಿದ್ದಾರೆ.
Advertisement
Advertisement
ಶಸ್ತ್ರ ಚಿಕಿತ್ಸೆ ನಡೆಸುವ ಬಗ್ಗೆ ರಾಷ್ಟ್ರೀಯ ಹದಿಹರೆಯದ ಮಕ್ಕಳ ಆರೋಗ್ಯ ಯೋಜನೆಯ ಸಹಾಯಕ ವ್ಯವಸ್ಥಾಪಕರಾದ ಸೌಮ್ಯ ಸಾಮಂಟ್ರೆ ಅವರೊಂದಿಗೆ ಮಕ್ಕಳ ಪೋಷಕರು ಮಾತುಕತೆ ನಡೆಸಿದ್ದಾರೆ.
Advertisement
ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳಿಗೆ ಎಂಆರ್‍ಐ, ಸಿಟಿ ಸ್ಕ್ಯಾನ್, ಆಂಜಿಯೋಗ್ರಾಮ್ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಿ ತಲೆಗಳನ್ನು ಬೇರೆ ಬೇರೆ ಮಾಡಲಾಗುತ್ತದೆ. ಹಾಗಾಗಿ ಸುಮಾರು 10ರಿಂದ 12 ವರ್ಷಗಳ ಕಾಲ ಮಕ್ಕಳ ಆರೋಗ್ಯ ಕುರಿತು ಹಲವು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ ಎಂದು ಏಮ್ಸ್ ನ ನರ ವಿಜ್ಞಾನ ಕೇಂದ್ರದ ವೈದ್ಯ ಎ ಕೆ ಮಹಾಪಾತ್ರ ಅವರು ತಿಳಿಸಿದ್ದಾರೆ.
Advertisement
ಜೋಡಿಸಲ್ಪಟ್ಟ ತಲೆಗಳೊಂದಿಗೆ ಅವಳಿ ಮಕ್ಕಳು ಜನಿಸುವುದು ತೀರ ಅಪರೂಪವಾಗಿವೆ. 30 ಲಕ್ಷ ಮಕ್ಕಳಲ್ಲಿ ಒಬ್ಬರಂತೆ ಜನಿಸುತ್ತಾರೆ. ಈ ರೀತಿ ಜನಿಸಿದ ಮಕ್ಕಳ ಪೈಕಿ ಶೇ.50% ರಷ್ಟು ಮಕ್ಕಳು ಜನಿಸಿದ 24 ಗಂಟೆಯಲ್ಲಿ ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ. ಶಸ್ತ್ರಚಿಕಿತ್ಸೆಯ ಮಾಡಿದ ನಂತರವೂ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಡಾ.ದೀಪಕ್ ಗುಪ್ತಾ ಹೇಳೀದ್ದಾರೆ.