ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರ ನಾಯಕರು ಕನ್ನಡದಲ್ಲೇ ರಾಜ್ಯದ ಜನತೆಗೆ ಶುಭಾಶಯ ಕೋರುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶುಭಕೋರಿದ ಬೆನ್ನಲ್ಲೇ ಇದೀಗ ರಾಹುಲ್ ಗಾಂಧಿ ಕೂಡ ಕನ್ನಡದಲ್ಲೇ ವಿಶ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶುಭಕೋರಿದ ರಾಹುಲ್ ಗಾಂಧಿ. `ಪ್ರೀತಿಯ ಕನ್ನಡಿಗರಿಗೆ ಹೊಸ ವರ್ಷ ಯುಗಾದಿಯ ಹಾರ್ದಿಕ ಶುಭಾಶಯಗಳು. ಸುಖ, ಸಮೃದ್ಧಿ ಹಾಗೂ ಸಂತಸದ ಜೀವನ ನಿಮ್ಮದಾಗಲಿ. ಮುಂಬರುವ ಹೊಸ ವರ್ಷ ನವ ಕರ್ನಾಟಕ ನಿರ್ಮಾಣಕ್ಕೆ ಸಾಕ್ಷಿಯಾಗಲಿ ಎಂದು ಹಾರೈಸುವುದಾಗಿ ಅವರು ತಿಳಿಸಿದ್ದಾರೆ.
Advertisement
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹಬ್ಬದ ಪ್ರಯುಕ್ತ ವಿಶ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ವಿಡಿಯೋ ಮೂಲಕ ಶೂಭಕೋರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ವಿಡಿಯೋಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನವ ಕರ್ನಾಟಕ ಕಟ್ಟುವ ಸಂಕಲ್ಪ ತೊಡೋಣ- ಜನತೆಗೆ ಯುಗಾದಿ ಶುಭಾಶಯ ಕೋರಿದ ಶಾ, ಮೋದಿ
Advertisement
Advertisement
ಯುಗಾದಿ ಹಬ್ಬದಂದು ಕಹಿ-ಸಿಹಿ ಎರಡು ತಿನ್ನುತ್ತೇವೆ. ಜೀವನದಲ್ಲಿ ಕಹಿ-ಸಿಹಿ ಎರಡು ಇರಬೇಕು ಅನ್ನೋದು ಇದರ ಅರ್ಥ. ನಾಡಿನ ಜನತೆ ಸಿಹಿಯನ್ನು ಹೆಚ್ಚು ಅನುಭವಿಸಲಿ ಅಂತ ಹಾರೈಸುತ್ತೇನೆ. ಹೊಸ ವರ್ಷ ಪ್ರತಿಯೊಬ್ಬರಿಗೂ ಸಂವೃದ್ಧಿಯನ್ನ ಉಂಟು ಮಾಡಲಿ. ನವ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ. ನಮ್ಮ ಸರ್ಕಾರ ಜನರಿಗೆ ಹೆಚ್ಚು ಸಿಹಿಯನ್ನ ನೀಡಿದೆ. ಮುಂದೆಯೂ ಹೆಚ್ಚು ಸಿಹಿ ನೀಡುತ್ತೇವೆ. ರಾಜ್ಯವನ್ನ ದೇಶದಲ್ಲೇ ನಂಬರ್ ಒನ್ ಮಾಡಲು ನವ ಕರ್ನಾಟಕ ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ವಿಡಿಯೋ ಸಂದೇಶ ನೀಡಿದ್ದಾರೆ.
Advertisement
ಒಟ್ಟಿನಲ್ಲಿ ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ಮತ ಓಲೈಕೆಗಾಗಿ ಕನ್ನಡದಲ್ಲೇ ರಾಜ್ಯದ ಜನತೆಗೆ ಶುಭಾಶಯ ಕೋರುತ್ತಿದ್ದಾರೆ.
ಪ್ರೀತಿಯ ಕನ್ನಡಿಗರಿಗೆ ಹೊಸ ವರ್ಷ ಯುಗಾದಿಯ ಹಾರ್ದಿಕ ಶುಭಾಶಯಗಳು. ಸುಖ, ಸಮೃದ್ಧಿ ಹಾಗೂ ಸಂತಸದ ಜೀವನ ನಿಮ್ಮದಾಗಲಿ. ಮುಂಬರುವ ಹೊಸ ವರ್ಷ ನವ ಕರ್ನಾಟಕ ನಿರ್ಮಾಣಕ್ಕೆ ಸಾಕ್ಷಿಯಾಗಲಿ ಎಂದು ಹಾರೈಸುತ್ತೇನೆ.
— Rahul Gandhi (@RahulGandhi) March 18, 2018
ಬೇವು-ಬೆಲ್ಲದಂತೆ ಹಳೆಯ ಕಹಿ ನೆನಪುಗಳನ್ನು ಮರೆತು, ಹೊಸ ಭರವಸೆಯೊಂದಿಗೆ ಮುನ್ನಡೆಯಬೇಕು ಎಂಬ ಸಂದೇಶ ಸಾರುವ ಯುಗಾದಿ ಹಬ್ಬದ ಸಂದರ್ಭದಲ್ಲಿ ನಮ್ಮೊಳಗಿನ ವೈವಿಧ್ಯತೆಯನ್ನು ಗೌರವಿಸುತ್ತಾ, ನವ ಕರ್ನಾಟಕ ನಿರ್ಮಾಣದತ್ತ ಒಂದಾಗಿ ಸಾಗೋಣ. pic.twitter.com/BZ3a6U0GjJ
— Siddaramaiah (@siddaramaiah) March 18, 2018
ಯುಗದ ಆದಿಯು ಸಮಸ್ತರ ಬಾಳಿನ ಹರ್ಷಕ್ಕೆ ಬುನಾದಿಯಾಗಲಿ. #Ugadi #HappuUgadi #Ugadi2018 pic.twitter.com/ckI1P7hI0i
— B.S.Yediyurappa (@BSYBJP) March 17, 2018