ಬೆಂಗಳೂರು: ಶುಕ್ರವಾರ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಡಕ್ ಸಂದೇಶ ರವಾನಿಸಿದೆ.
ಸರ್ಕಾರ ಬಿದ್ರೂ ಎದ್ರು ಅದಕ್ಕೆ ನೀವೇ ಹೊಣೆಯಾಗಲಿದ್ದೀರಿ. ನೀವು ಏನ್ ಮಾಡ್ತಿರೋ ಗೊತ್ತಿಲ್ಲ. ಸರ್ಕಾರವನ್ನು ಬಚಾವ್ ಮಾಡೋದು ನಿಮ್ಮ ಜವಾಬ್ದಾರಿಯಾಗಿದೆ. ಇದುವರೆಗೂ ಎಲ್ಲವೂ ನೀವು ಹೇಳಿದಂತೆ ನಡೆದಿದೆ ಎಂಬುದಾಗಿ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
Advertisement
ರಮೇಶ್ ಜಾರಕಿಹೋಳಿ ಬದಲು ಸತೀಶ್ ಜಾರಕಿಹೋಳಿ, ನಾಗೇಂದ್ರ ಬದಲು ತುಕಾರಾಂ, ಶಂಕರ್ ಬದಲು ಶಿವಳ್ಳಿಯನ್ನ ಸಂಪುಟಕ್ಕೆ ಸೇರಿಸಿದ್ದೆವು. ಈಗ ಸಚಿವ ಸ್ಥಾನ ಕಳೆದುಕೊಂಡವರೇ ಬಂಡಾಯವೆದ್ದು ಸರ್ಕಾರ ಬೀಳಿಸಲು ಮುಂದಾಗಿದ್ದಾರೆ. ಮುಂದಿನ ಎಲ್ಲಾ ಬೆಳವಣಿಗೆಗಳಿಗೆ ನೀವೇ ಸಂಪೂರ್ಣ ಜವಾಬ್ದಾರರು. ಲೋಕಸಭಾ ಚುನಾವಣೆವರೆಗೂ ಸರ್ಕರಕ್ಕೆ ಕಿಂಚಿಂತೂ ಧಕ್ಕೆ ಆಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖಡಕ್ಕಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv