– ಪಹಲ್ಗಾಮ್ ವಿಚಾರದಲ್ಲಿ ಸರ್ಕಾರದ ನಿರ್ಣಯಕ್ಕೆ ನಮ್ಮ ಬೆಂಬಲ: ಎಐಸಿಸಿ ಅಧ್ಯಕ್ಷ
ಬೆಂಗಳೂರು: ಸರ್ಕಾರ ಒಂದು ಸಭೆ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು. ಆದರೆ, ಅವರ ಹಾಜರಾತಿ ಇರಲಿಲ್ಲ. ಪ್ರಧಾನ ಮಂತ್ರಿಗಳ ಈ ವರ್ತನೆ ಸರಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿಕಾರಿದರು.
ನಗರದ ಕೆಜೆ ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿ (Pahalgam Terror Attack) ವಿಚಾರವಾಗಿ ಪ್ರಧಾನ ಮಂತ್ರಿಗಳು ಸರ್ವ ಪಕ್ಷಗಳ ಸಭೆ ಕರೆದಿದ್ದರು. ನಾವು ಎಲ್ಲರೂ ಹೋಗಿದ್ದೆವು. ಎಲ್ಲರೂ ಭಾಗಿಯಾಗಿದ್ದೆವು. ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಕೂಡ ಇದ್ದರು. ಸರ್ಕಾರ ಒಂದು ಸಭೆಯನ್ನ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು. ಆದರೆ, ಅವರ ಹಾಜರಾತಿ ಇರಲಿಲ್ಲ. ಈ ನಡೆ ಸರಿಯಲ್ಲ. ಇಂತಹ ಘಟನೆ ನಡೆದಿದೆ. ಸುಮಾರು 26 ಜನರು ಮೃತಪಟ್ಟಿದ್ದಾರೆ. ಅನೇಕ ಜನರು ಗಾಯಾಳುಗಳಾಗಿದ್ದಾರೆ. ಪ್ರಧಾನ ಮಂತ್ರಿಗಳ ಈ ಆಟಿಟ್ಯೂಡ್ ಸರಿ ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ: ಸಿದ್ದರಾಮಯ್ಯ
ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ ಹೋಗಿದ್ದೀರಿ. ದೆಹಲಿಯಲ್ಲಿ ಬರಲು ಆಗುವುದಿಲ್ಲ. ಅವರು ಸೀರಿಯಸ್ ಇಲ್ಲ ಅಂತ ಅರ್ಥ. ಅವರು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಬೇರೆ ಕಡೆ ಭಾಷಣ ಮಾಡುವ ಬದಲು ಇಲ್ಲಿ ಬಂದು ಸಮಜಾಯಿಷಿ ಹೇಳಬೇಕಿತ್ತು. ಏನೇನು ಘಟನೆ ನಡೆಯಿತು, ಯಾಕೆ ನಡೆಯಿತು, ಯಾರು ಹೊಣೆ ಹೊತ್ತಿದ್ದಾರೆ? ಸೆಕ್ಯೂರಿಟಿ ಲ್ಯಾಪ್ಸ್ ಆಗಿದೆಯಾ? ಇಂಟೆಲಿಜೆನ್ಸ್ ಲ್ಯಾಪ್ಸ್ ಆಗಿದೆಯಾ? ಐಬಿ ಲ್ಯಾಪ್ಸ್ ಆಗಿದೆಯಾ? ಇನ್ಫಾರ್ಮರ್ಸ್ ಲ್ಯಾಪ್ಸ್ ಆಗಿದೆಯಾ, ಪೊಲೀಸರ ಲ್ಯಾಪ್ಸ್ ಆಗಿದೆಯಾ? ಯಾರದ್ದು ಅನ್ನೋದು ನಮಗೆ ತಿಳಿಸಬೇಕು. ಆದರೆ, ಅವರು ಬರಲೇ ಇಲ್ಲ. ಅದಕ್ಕೆ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು ಎಂದು ಬೇಸರಿಸಿದರು.
ಪಹಲ್ಗಾಮ್‌ನಲ್ಲಿ ಏನಾಯ್ತು? ಜಾತಿ ಕೇಳಿ, ಧರ್ಮ ಕೇಳಿ ಬಲಿ ಹಾಕಿದರು. ಆ ರೀತಿ ನಡೆಯಬಾರದು. ಈ ರಾಜ್ಯದಲ್ಲೂ ಕೂಡ ಕೆಲವರು ಜಾತಿಯನ್ನು ಆಧರಿಸಿ, ಧರ್ಮವನ್ನೇ ಆಧರಿಸಿ ಮಾತನಾಡುತ್ತಾರೆ. ಅದು ಯಾವುದೇ ಕಾರಣಕ್ಕೂ ನಡೆಯಬಾರದು. ಶಿಕ್ಷಣ ಸಂಸ್ಥೆಯಲ್ಲಿ ನಾನು ಜಾತಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ನೀವು ವಿದ್ಯಾರ್ಥಿಗಳು ಕೂಡ ಜಾತಿ-ಧರ್ಮದ ಬಗ್ಗೆ ಮಾತನಾಡಬಾರದು ಎಂದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಕೋರನ ಮನೆ ಧ್ವಂಸ – 24 ಗಂಟೆಗಳಲ್ಲಿ 3ನೇ ಮನೆ ಉಡೀಸ್
ಸ್ವತಃ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಇದು ಸೆಕ್ಯೂರಿಟಿ ಲ್ಯಾಪ್ಸ್ ಅಂತ. ಆ ಕಾರಣಕ್ಕಾಗಿ ಸಭೆ ಕರೆದಿದ್ದೇವೆ ಅಂತ ಅಮಿತ್ ಶಾ ಹೇಳಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿ ಎಂದು ಕೇಂದ್ರ ಗೃಹ ಸಚಿವರಿಗೆ ಹೇಳಿದ್ದೇವೆ. ಎಲ್ಲವನ್ನೂ ವ್ಯವಸ್ಥೆ ಮಾಡಬೇಕಿತ್ತು. ನೀವು ವ್ಯವಸ್ಥೆ ಮಾಡದೆ ಇರುವುದರಿಂದಲೇ ಈ ಸ್ಥಿತಿಗೆ ಬಂದಿರೋದು. ಇನ್ಮುಂದೆ ಈ ರೀತಿ ಆಗೋದಿಲ್ಲ ಅಂತ ಅಮಿತ್ ಶಾ ತಿಳಿಸಿದ್ದಾರೆ. ಮೂರು ಹಂತಗಳ ಸೆಕ್ಯೂರಿಟಿ ಇದ್ದರೂ ಕೂಡ ಇಷ್ಟು ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ. ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಅಂತ ತಿಳಿಸಿದ್ದೇವೆ. ಸರ್ಕಾರದ ನಿರ್ಣಯಕ್ಕೆ ನಾವು ಕೂಡ ಬೆಂಬಲ ಸೂಚಿಸುತ್ತೇವೆ ಅಂತ ತಿಳಿಸಿದ್ದೇವೆ ಎಂದರು.