ಚೆನ್ನೈ: ನೆರೆಯ ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷದ ಅಧಿಪತ್ಯಕ್ಕಾಗಿ ನಡೆಯುತ್ತಿದ್ದ ಸಮರದಲ್ಲಿ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಕೈ ಮೇಲಾಗಿದೆ.
ಇಂದು ನಡೆದ ಸರ್ವಸದಸ್ಯರ ಸಮಾವೇಶದಲ್ಲಿ ಪಕ್ಷದ ತಾತ್ಕಾಲಿಕ ಪ್ರಧಾನಕಾರ್ಯದರ್ಶಿಯಾಗಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ. ಇದೇ ಸಭೆಯಲ್ಲಿ ಪನ್ನೀರ್‌ಸೆಲ್ವಂರನ್ನು ಪಕ್ಷದಿಂದ ಉಚ್ಛಾಟಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಓಪಿಎಸ್ ಬೆಂಬಲಿಗರನ್ನು ಪಕ್ಷದಿಂದ ಹೊರಹಾಕಲಾಗಿದೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ
Advertisement
That's my Leader@EPSTamilNadu@AIADMKITWINGOFL@AIADMKOfficial#AIADMK pic.twitter.com/VZ1lSSMvTc
— AIADMK KUMBAKONAM (@admk_kumbakonam) July 11, 2022
Advertisement
ಉಚ್ಛಾಟನೆ ವಿರೋಧಿಸಿ ಪನ್ನೀರ್‌ಸೆಲ್ವಂ ಬೆಂಬಲಿಗರು ಸಭೆ ಸ್ಥಳದಲ್ಲಿ ಭಾರೀ ಗಲಾಟೆ ಮಾಡಿದ್ದಾರೆ. ಈ ವೇಳೆ ಓಪಿಎಸ್ ಮತ್ತು ಇಪಿಎಸ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ.
Advertisement
ಕಲ್ಲು ತೂರಾಟ ಕೂಡ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ವಾಹನಗಳು ಕೂಡ ಜಖಂ ಆಗಿವೆ. ಈ ಮಧ್ಯೆ, ಓಪಿಎಸ್ ಬೆಂಬಲಕ್ಕೆ ಶಶಿಕಲಾ ಧಾವಿಸಿದ್ದಾರೆ. ಪಳನಿಸ್ವಾಮಿಗೆ ಅಧಿಕಾರ ನೀಡುವುದನ್ನು ಒಪ್ಪುವುದಿಲ್ಲ ಎಂದಿದ್ದಾರೆ.