ಗಾಂಧಿನಗರ: ಗುಜರಾತ್‌ನ (Gujarat) ಅಹಮದಾಬಾದ್‌ನ ಮಹಿಳೆಯೊಬ್ಬಳು ತನ್ನ ಪತಿ (Husband) ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಮೇಮ್ನಗರದ 21 ವರ್ಷದ ಮಹಿಳೆ ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಬಳಿಕ ವಡೋದರಾದ ಹಳ್ಳಿಯಲ್ಲಿ ತಮ್ಮ ಪತಿಯ ಅವಿಭಕ್ತ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿ ಮಹಿಳೆ ಅಹಮದಾಬಾದ್‌ನಲ್ಲಿರುವ ತಮ್ಮ ಪೋಷಕರ ಮನೆಗೆ ಹಿಂತಿರುಗಿದ್ದಳು.
ಮಹಿಳೆ ಪತಿಯ ಮನೆ ತೊರೆಯುವ ಸಮಯದಲ್ಲಿ ಅಲರ್ಜಿಯಾಗಿದ್ದು, ಮೈಮೇಲೆ ಗುಳ್ಳೆಗಳಾಗಿದ್ದವು. ಬಳಿಕ ಗುಣವಾಗಿತ್ತು. ಅದನ್ನು ಪತಿಗೆ ತೋರಿಸಲು ಇನ್‌ಸ್ಟಾಗ್ರಾಮ್ ವೀಡಿಯೊ ಕರೆ ಮಾಡಿದ್ದಾಗ ಆತ ಒಪ್ಪಿಗೆಯಿಲ್ಲದೆ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಈಗ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.
ಪತಿಯ ಮನೆಗೆ ಮರಳಲು ನಿರಾಕರಿಸಿ ವಿಚ್ಛೇದನಕ್ಕೆ ಒತ್ತಾಯಿಸಿದಾಗ, ಅವನು ಅವಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾನೆ. ಜನವರಿ ಮೊದಲ ವಾರದಲ್ಲಿ, ಅವನು ಅವಳ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳನ್ನು ವಾಟ್ಸಾಪ್ ಸ್ಟೇಟಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದರಿಂದ ನೊಂದ ಮಹಿಳೆ ಘಟ್ಲೋಡಿಯಾ ಪೊಲೀಸ್ ಠಾಣೆಯಲ್ಲಿ ಮಾನನಷ್ಟ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.