– ಮದ್ವೆಯಾದ ಮೂರೇ ದಿನಕ್ಕೆ ಹೋಟೆಲ್ ಬುಕ್
ಅಹಮದಾಬಾದ್: ಕ್ರೆಡಿಟ್ ಕಾರ್ಡ್ ಮೂಲಕ ಪತಿಯ ಅಕ್ರಮ ಸಂಬಂಧ ಬಯಲಾದ ಘಟನೆ ಗುಜರಾತಿನ ಅಹಮದಾಬಾದ್‍ನಲ್ಲಿ ನಡೆದಿದೆ.
ಪತಿ ಮದುವೆಯಾದ ಮೂರನೇ ದಿನಕ್ಕೆ ಕಚೇರಿಯ ಕೆಲಸದ ನಿಮಿತ್ತ ಹೊರ ಹೋಗುವುದಾಗಿ ಹೇಳಿದ್ದ. ಅದೇ ದಿನ ಕಚೇರಿಗೆ ತೆರಳದೇ ಹೋಟೆಲ್ ನಲ್ಲಿ ಮಹಿಳೆಯೊಂದಿಗೆ ರೂಮ್ ಬುಕ್ ಮಾಡಿ ವಾಸ್ತವ್ಯ ಹೂಡಿದ್ದನು. ಒಂದು ದಿನ ಪತಿಯ ಕ್ರೆಡಿಟ್ ಕಾರ್ಡ್ ಬಿಲ್ ಚೆಕ್ ಮಾಡುತ್ತಿರುವಾಗ ಹೋಟೆಲ್‍ನಲ್ಲಿ ಹಣ ಪಾವತಿಸಿದ ವಿಚಾರ ಪತ್ನಿಯ ಗಮನಕ್ಕೆ ಬಂದಿದೆ.
ಈ ವಿಷಯವನ್ನು ಪತ್ನಿ ತನ್ನ ಸೋದರನಿಗೆ ತಿಳಿಸಿದ್ದಾಳೆ. ಸೋದರ ಪರಿಶೀಲನೆ ನಡೆಸಿದಾಗ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಪತಿಯ ಅಕ್ರಮ ಸಂಬಂಧ ವಿಷಯ ಖಾತ್ರಿಯಾಗುತ್ತಿದ್ದಂತೆ ಮಹಿಳೆ ತನ್ನ ಅತ್ತೆ-ಮಾವನಿಗೆ ತಿಳಿಸಿದ್ದಾಳೆ. ಆದ್ರೆ ಅತ್ತೆ-ಮಾವ ಮಗನನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಜಗಳ ನಡೆಯುತ್ತಿದ್ದಂತೆ ಪತಿ ಹಾಗೂ ಕುಟುಂಬಸ್ಥರು ವಿಚ್ಛೇಧನ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.