ಲಕ್ನೋ: ಗೋರಖನಾಥ ದೇವಸ್ಥಾನದ (Gorakhnath Temple) ಮೇಲೆ ದಾಳಿ ನಡೆಸಿದ ಉಗ್ರನಿಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಿಶೇಷ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖನಾಥ ದೇವಸ್ಥಾನದ ಮೇಲೆ ಅಹ್ಮದ್ ಮುರ್ತಜಾ ಅಬ್ಬಾಸಿ (Ahmed Murtaza Abbasi) 2022ರ ಏಪ್ರಿಲ್ 3 ರಂದು ದಾಳಿ ನಡೆಸಿದ್ದ. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಉತ್ತರ ಪ್ರದೇಶ ಪ್ರಾಂತೀಯ ಪೊಲೀಸರ ಮೇಲೆ ಅಹ್ಮದ್ ಕುಡುಗೋಲಿನಿಂದ ಹಲ್ಲೆ ನಡೆಸಿದ್ದ. ದಾಳಿ ಬಳಿಕ ಆತನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದರು.
Advertisement
ಪ್ರಕರಣದ ವಿಚಾರಣೆ ನಡೆಸಿದ್ದ ಎನ್‌ಐಎ ನ್ಯಾಯಾಲಯ (NIA Special Court) ಮುರ್ತಜಾ ಅಬ್ಬಾಸಿ ದೋಷಿ ಎಂದು ತೀರ್ಪು ನೀಡಿ ಸೋಮವಾರ ಗಲ್ಲು ಶಿಕ್ಷೆಯನ್ನು (Death Sentence) ವಿಧಿಸಿದೆ. ಇದನ್ನೂ ಓದಿ: ಬೇರೊಬ್ಬನ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದಕ್ಕೆ ಪ್ರಿಯತಮೆಯ ಮೇಲೆ ಶೂಟೌಟ್!
Advertisement
Advertisement
ಯಾರು ಈ ಮುರ್ತಜಾ?
ಮುರ್ತಜಾ ಮುಂಬೈ ಐಐಟಿಯಲ್ಲಿ ರಾಸಾಯನಿಕ ಎಂಜಿನಿಯರ್ ಪದವಿ ಪಡೆದಿದ್ದ. 2016 ರಲ್ಲಿ ಭಾರತದಿಂದ ಪಲಾಯನ ಮಾಡಿರುವ ವಿವಾದಿತ ಇಸ್ಲಾಮಿಕ್ ಧರ್ಮಗುರು ಝಾಕಿರ್ ನಾಯ್ಕ್‌ನಿಂದ ಮುರ್ತಜಾ ಸ್ಫೂರ್ತಿ ಪಡೆದಿದ್ದ. ತನಿಖೆಯ ಸಮಯದಲ್ಲಿ ಪೊಲೀಸರು ಆತನ ಲ್ಯಾಪ್‌ಟಾಪ್ ಮತ್ತು ಪೆನ್ ಡ್ರೈವ್‌ನಲ್ಲಿ ಜಿಹಾದ್‌ಗೆ ಸಂಬಂಧಿಸಿದ ವೀಡಿಯೊಗಳು ಸೇರಿದಂತೆ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
Advertisement
ಈತ ಗೋರಖ್‌ಪುರ ನಿವಾಸಿಯಾಗಿದ್ದರೂ ಆಧಾರ್ ಕಾರ್ಡ್ ಮುಂಬೈನಲ್ಲಿ ಮಾಡಲಾಗಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ್ದ ತಂದೆ ಮಗ ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k