ನವದೆಹಲಿ: ಸತತ ಎರಡೂ ಲೋಕಸಭೆ ಚುನಾವಣೆಯಲ್ಲಿ (Loksabha Election) ಸೋತಿರುವ ಕಾಂಗ್ರೆಸ್ (Congress) 2024ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈಗ ಮತ್ತೊಮ್ಮೆ ವಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ.
ಎರಡೂ ಚುನಾವಣೆಯಲ್ಲಿ ವಿಪಕ್ಷಗಳು ಒಂದಾಗದೇ ಚುನಾವಣೆ ಎದುರಿಸಿದ ಪರಿಣಾಮ ಸೋಲಾಗಿದೆ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದೆ. ಈ ತಪ್ಪು 2024ರ ಚುನಾವಣೆಯಲ್ಲೂ ನಡೆಯದೇ ಇರಲು ಈಗಲೇ ಮಹಾಮೈತ್ರಿ ಮಾಡಿಕೊಳ್ಳಲು ಚಿಂತನೆ ನಡೆಸಿದೆ.
Advertisement
ಫೆ.24ರಿಂದ ಛತ್ತೀಸ್‌ಗಢ (Chhattisgarh) ರಾಜಧಾನಿ ರಾಯಪುರದಲ್ಲಿ ಮೂರು ದಿನಗಳ ಕಾಲ ಕಾಂಗ್ರೆಸ್ 85ನೇ ಮಹಾಧಿವೇಶನ ನಡೆಯಲಿದ್ದು, ಅಲ್ಲಿ ವಿಪಕ್ಷಗಳ ಮೈತ್ರಿಕೂಟದ ಬಗ್ಗೆ ಮಹತ್ವದ ಚರ್ಚೆಯನ್ನು ನಡೆಸಲು ನಿರ್ಧರಿಸಲಾಗಿದೆ.
Advertisement
Advertisement
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ನಾಯಕ ಜೈರಾಂ ರಮೇಶ್ (Jairam Ramesh), ಬಿಜೆಪಿ ಸೋಲಿಸಲು ಈಗಾಗಲೇ ನಾವು ಹಲವು ರಾಜಕೀಯ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದೇವೆ. ಕಾಂಗ್ರೆಸ್ ಪಕ್ಷವಿಲ್ಲದೆ ಬಲಿಷ್ಠ ಪ್ರತಿಪಕ್ಷಗಳ ಕೂಟ ರಚನೆ ಅಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಪಕ್ಷದ ಪರಮೋಚ್ಚ ನಿರೂಪಣಾ ಸಂಸ್ಥೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಹುದ್ದೆಗಳಿಗೆ ಚುನಾವಣೆ ನಡೆಸಬೇಕೆ ಎಂಬುದರ ಬಗ್ಗೆ ಅಧಿವೇಶನದ ಮೊದಲ ದಿನವೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಕೊಟ್ಟ ಟಾಸ್ಕ್‌ನಲ್ಲಿ ಕರ್ನಾಟಕ ಬಿಜೆಪಿ ಫೇಲ್
ನಿತೀಶ್ ಆಫರ್‌ಗೆ ಸಿದ್ಧ:
ವಿರೋಧ ಪಕ್ಷಗಳ ಜೊತೆ ಮೈತ್ರಿಗೆ ಕಾಂಗ್ರೆಸ್ ಮುಂದಾಗಬೇಕು, ಮೈತ್ರಿ ಆದರೆ 100 ಸೀಟೂ ಬಿಜೆಪಿಗೆ ಬರುವುದಿಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಜೈರಾಂ ರಮೇಶ್, ಮೈತ್ರಿಗೆ ಕಾಂಗ್ರೆಸ್ ಸಿದ್ಧವಿದೆ. ಹಲವು ರಾಜ್ಯಗಳಲ್ಲಿ ನಾವು ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿದ್ದೇವೆ. ನಿತೀಶ್ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಕೆಲ ವಿಪಕ್ಷಗಳು ಸಭೆಗೆ ಬರುತ್ತವೆ. ಆದರೆ ನಂತರ ಒಳಗೊಳಗೇ ಬಿಜೆಪಿಗೆ ಬೆಂಬಲಿಸುತ್ತವೆ ಎಂದು ಕೆಲ ವಿಪಕ್ಷಗಳ ವಿರುದ್ಧ ಜೈರಾಂ ರಮೇಶ್ ಸಿಟ್ಟು ಹೊರಹಾಕಿದರು.
ಫೆಬ್ರವರಿ 24 ರಿಂದ 26 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ 15,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ಅವರಲ್ಲಿ 1,338 ಚುನಾಯಿತ AICC ಪ್ರತಿನಿಧಿಗಳು, ಎಲ್ಲಾ ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥರು, ಎಐಸಿಸಿ ಮುಂಚೂಣಿ ಸಂಘಟನೆಗಳು ಮತ್ತು ಇಲಾಖೆಗಳ ಮುಖ್ಯಸ್ಥರು, ಅಲ್ಲದೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಎಲ್ಲಾ ಯಾತ್ರಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k