ಅಮರಾವತಿ: ಅಯೋಧ್ಯೆಯಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಮಾಯಣದಲ್ಲಿ (Ramayana) ಮಹತ್ವದ ಸ್ಥಾನ ಪಡೆದಿರುವ ಆಂಧ್ರಪ್ರದೇಶದ (Andhra Pradesh) ಲೇಪಾಕ್ಷಿಯ ವೀರಭದ್ರ ದೇವಸ್ಥಾನಕ್ಕೆ (Lepakshi Veerbhadra Temple) ಭೇಟಿ ನೀಡಿದ್ದಾರೆ.
ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಜಟಾಯು (Jatayu) ಇದೇ ಜಾಗದಲ್ಲಿ ಆತನನ್ನು ಬೆನ್ನಟ್ಟಿ ಹೋರಾಟ ನಡೆಸಿತ್ತು. ಬಳಿಕ ರಾವಣನ ದಾಳಿಯಿಂದ ನೆಲಕ್ಕೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದ ಜಟಾಯು ಸೀತಾ ದೇವಿಯನ್ನು ರಾವಣ ಅಪಹರಿಸಿದ ವಿಚಾರವನ್ನು ಶ್ರೀರಾಮನಿಗೆ ತಿಳಿಸಿ ಪ್ರಾಣ ಬಿಟ್ಟಿತ್ತು. ಬಳಿಕ ರಾಮ ಜಟಾಯುವಿನ ಅಂತ್ಯಕ್ರಿಯೆ ನಡೆಸಿ ಮೋಕ್ಷ ಕಲ್ಪಿಸಿದ್ದ ಎಂಬ ಪ್ರತೀತಿ ಇದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ; ಇಂದಿನಿಂದ ಪೂಜಾಕಾರ್ಯ ಆರಂಭ – ಯಾವ ದಿನ ಏನು ಕಾರ್ಯಕ್ರಮ?
ಇನ್ನೂ ಬುಧವಾರ, ಮೋದಿಯವರು ಕೇರಳದ ಗುರುವಾಯೂರು ಮತ್ತು ತ್ರಿಪ್ರಯಾರ್‍ನ ಶ್ರೀ ರಾಮಸ್ವಾಮಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಜ.22 ರಂದು ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಅಯೋಧ್ಯೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಇನ್ನೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ವಿಗ್ರಹವನ್ನು ಪ್ರಾಣಪ್ರತಿಷ್ಠೆಗೆ ಆಯ್ಕೆ ಮಾಡಲಾಗಿದೆ. ಈ ಸಮಾರಂಭಕ್ಕೆ ಕೋಟ್ಯಂತರ ರಾಮನ ಭಕ್ತರು ಉತ್ಸಾಹದಿಂದ ಕಾದಿದ್ದಾರೆ. ಈ ಸಮಯದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಜನ ಅಯೋಧ್ಯೆಗೆ ತೆರಳುವ ಸಾಧ್ಯತೆ ಇದ್ದು, ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ದೇವಾಲಯ ಹಾಗೂ ಅಯೋಧ್ಯೆ ನಗರದ ಸುತ್ತಮುತ್ತ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಚಿನ್ನದ ಬಾಗಿಲು ಅಳವಡಿಕೆ ಕಾರ್ಯ ಪೂರ್ಣ