ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಮತ್ತೆ ಕುಟುಂಬ ರಾಜಕಾರಣ ಸದ್ದು ಮಾಡಿದೆ. ಜಿಲ್ಲೆಯಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ಕೃಷಿ ಸಚಿವ ಚಲುವರಾಯಸ್ವಾಮಿ (Cheluvarayaswamy) ತಮ್ಮ ಪುತ್ರ ಸಚಿನ್ (Sachin) ಅವರನ್ನು ಅಧಿಕೃತವಾಗಿ ರಾಜಕೀಯ (Politics) ಕ್ಷೇತ್ರಕ್ಕೆ ಪ್ರವೇಶ ಮಾಡಿಸಲು ಮುಂದಾಗಿದ್ದಾರೆ.
ಇಷ್ಟು ದಿನ ಸಿನಿಮಾ (Cinema) ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದ ಸಚಿನ್ ಚಲುವರಾಯಸ್ವಾಮಿ ಇದೀಗ ರಾಜಕೀಯ ರಂಗ ಪ್ರವೇಶ ಮಾಡಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ಆರಂಭಿಸಿದ್ದಾರೆ.
ಈಗಾಗಲೇ ನಾಗಮಂಗಲ (Nagamangala) ವಿಧಾನಸಭಾ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಸಚಿನ್ ವಾರದಲ್ಲಿ ಮೂರರಿಂದ ನಾಲ್ಕು ದಿನ ಕ್ಷೇತ್ರದಲ್ಲೇ ಇರುತ್ತಾರೆ. ನಾಗಮಂಗಲದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆ, ಕಾರ್ಯಕ್ರಮಗಳು, ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಂದುವರಿದ ಭಾಗ ಎಂಬಂತೆ ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಿಂತಿದ್ದಾರೆ. ಇದನ್ನೂ ಓದಿ: 180 ರೂ. ಟೋಲ್ ಉಳಿಸಲು ಹೋಗಿ ದುರಂತ ಅಂತ್ಯ – ಒಂದೇ ಕುಟುಂಬದ ನಾಲ್ವರ ಸಾವು
- Advertisement
- Advertisement
ಭವಿಷ್ಯದ ದೃಷ್ಟಿಯಿಂದ ಚಲುವರಾಯಸ್ವಾಮಿ ತಮ್ಮ ಮಗನ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಲು ಲೋಕಲ್ ಪಾಲಿಟಿಕ್ಸ್‌ಗೆ ಇಳಿಸಿದ್ದಾರೆ ಎಂಬ ಮಾತು ಈಗ ಕೇಳಿ ಬಂದಿದೆ. ಮುಂಬರುವ ವಿಧಾನಸಭಾಕ್ಷೇತ್ರ, ಲೋಕಸಭಾ ಕ್ಷೇತ್ರದ ಚುನಾವಣೆ ಹೊತ್ತಿಗೆ ಪುತ್ರನನ್ನು ಸಂಪೂರ್ಣ ತಯಾರಿ ಮಾಡಲು ಚಲುವರಾಯಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈಗ ಸಚಿನ್ ಚಲುವರಾಯಸ್ವಾಮಿ ಸ್ಪರ್ಧಿಸುತ್ತಿರುವುದು ಪರ, ವಿರೋಧ ಚರ್ಚೆಗೆ ಕಾರಣವಾಗಿದೆ. ಇದು ಕುಟುಂಬ ರಾಜಕೀಯ ಅಲ್ವಾ ಎಂದು ಜೆಡಿಎಸ್ ಕಾರ್ಯಕರ್ತರ ಟೀಕೆ ಮಾಡಿದರೆ ದೇವೇಗೌಡರ ಇಡೀ ಕುಟುಂಬ ಎಲ್‌ಎಲ್‌ಎ, ಎಂಪಿ, ಎಂಎಲ್‌ಸಿ ಆಗಬಹದು. ಸಹಕಾರ ಸಂಘದ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಪುತ್ರ ಸ್ಪರ್ಧಿಸಿದರೆ ತಪ್ಪೇನು ಎಂದು ಕೈ ಕಾರ್ಯಕರ್ತರು ತಿರುಗೇಟು ನೀಡುತ್ತಿದ್ದಾರೆ. ಇದನ್ನೂ ಓದಿ:ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ – ಇನ್ನೂ 4 ದಿನ ಮಳೆ, ಬಳಿಕ ಉಷ್ಣಾಂಶದಲ್ಲಿ ಹೆಚ್ಚಳ ಸಾಧ್ಯತೆ
ಮಂಡ್ಯದಲ್ಲಿ ದೇವೇಗೌಡರ (Devegowda) ಕುಟುಂಬದ ಪ್ರಾಬಲ್ಯ ಸ್ವಲ್ಪ ಜಾಸ್ತಿಯೇ ಇದೆ. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿಸಿದ್ರು. ಆದರೆ ಈ ಪ್ರಯತ್ನ ಫಲ ನೀಡಲಿಲ್ಲ.
ನಿಖಿಲ್ ಏಕಾಏಕಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭಸಿದ್ದಾರೆ. ಈ ತಪ್ಪು ತಮ್ಮ ಪುತ್ರನ ರಾಜಕೀಯ ಪ್ರವೇಶದಲ್ಲಿ ಆಗಬಾರದು ಎಂದು ಸಚಿವ ಚಲುವರಾಯಸ್ವಾಮಿ ತಮ್ಮ ಪುತ್ರ ಸಚಿನ್ ಅವರನ್ನು ಲೋಕಲ್ ಪಾಲಿಟಿಕ್ಸ್ ಮೂಲಕ ರಾಜಕೀಯ ಚದುರಂಗದ ಆಟಕ್ಕೆ ಎಂಟ್ರಿ ಕೊಡಿಸುತ್ತಿದ್ದಾರೆ.