– ರೈತ ಸಂಪರ್ಕ ಕೇಂದ್ರಗಳಿಗೆ ಹೋದ ರೈತರಿಗೆ ಶಾಕ್
ಹಾವೇರಿ: ರಾಜ್ಯದಲ್ಲಿ ತೀವ್ರ ಬರಗಾಲ (Drought) ಆವರಿಸಿದೆ. ಮಳೆ ಇಲ್ಲದೆ ಭಾರೀ ಸಂಕಷ್ಟವನ್ನು ರೈತ (Farmer) ಎದುರಿಸುತ್ತಿದ್ದಾನೆ. ಈ ಮಧ್ಯೆ ಕೃಷಿ ಉಪಕರಣಗಳಿಗೆ (Agriculture Equipment) ಪಾವತಿಸಬೇಕಾದ ಹಣವನ್ನು ದುಪ್ಪಟ್ಟು ಮಾಡಿ ಸರ್ಕಾರ ರೈತರಿಗೆ ಶಾಕ್ ನೀಡಿದೆ.
Advertisement
ಹೌದು, ರೈತ ಸಂಪರ್ಕ ಕೇಂದ್ರಗಳಿಗೆ ಖರೀದಿಗೆ ಹೋದ ರೈತರು ಕೃಷಿ ಉಪಕರಣ ಬೆಲೆ ಕೇಳಿ ಅಘಾತಗೊಂಡಿದ್ದಾರೆ. ತುಂತುರು ಹಾಗೂ ಹನಿ ನೀರಾವರಿ ಉಪಕರಣಗಳ ಮೇಲಿನ ದರವನ್ನು ದುಪ್ಪಟ್ಟು ಮಾಡಿದೆ. ಕಳೆದ ಅವಧಿಯಲ್ಲಿ 1,876 ರೂ. ರಿಯಾಯಿತಿ ದರ ಪಾವತಿಸಿ 30 ಪೈಪ್, 5 ಸ್ಪ್ರಿಂಕ್ಲರ್ ಖರೀದಿಸಬಹುದಿತ್ತು. ಇದನ್ನೂ ಓದಿ: ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ
Advertisement
ಈಗ ಈ ಸರ್ಕಾರದ ಅವಧಿಯಲ್ಲಿ 30 ಪೈಪ್, 5 ಸ್ಪ್ರಿಂಕ್ಲರ್ ಖರೀದಿಗೆ 4,667 ರೂ. ದರ ನಿಗದಿ ಮಾಡಲಾಗಿದೆ. ಏಕಾಏಕಿ ಈ ಪರಿ ದರವನ್ನು ಹೆಚ್ಚಿಸಲು ಕಾರಣ ಏನು ಎನ್ನುವುದು ಗೊತ್ತಿಲ್ಲ. ಹೀಗೆ ದರವನ್ನು ದುಪ್ಪಟ್ಟು ಮಾಡಿದರೆ ನಾವು ಹೇಗೆ ಬದುಕುವುದು ಎಂದು ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು
Advertisement
ರೈತ ಸಂಪರ್ಕ ಕೇಂದ್ರಗಳಿಗೆ ಬಂದವರು ಹಣ ಹೊಂದಿಸಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ತಿಳಿಯದಂತೆ ಸರ್ಕಾರ ಆದೇಶ ಮಾಡಿದೆ ಎಂದು ಅನ್ನದಾತರು ಸಿಟ್ಟು ಹೊರಹಾಕುತ್ತಿದ್ದಾರೆ.
Advertisement