ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಅಜ್ಞಾತವಾಸಿ-ಪ್ರಿನ್ಸ್ ಇನ್ ಎಕ್ಸೆಲ್’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟುಹಾಕಿದೆ.
ಪವರ್ ಅಭಿಮಾನಿಗಳು ಟ್ರೇಲರ್ ಬಗ್ಗೆ ಅಪಾರ ಮೆಚ್ಚುಗೆಯನ್ನು ಸೂಚಿಸಿದ್ದು, ಯೂಟ್ಯೂಬ್ ನಲ್ಲಿ ನಂಬರ್ 3 ಟ್ರೆಂಡಿಂಗ್ ನಲ್ಲಿದೆ. ಎಂದಿನಂತೆ ಪವನ್ ಸಖತ್ ಫ್ರೆಶ್ ಆ್ಯಂಡ್ ಕೂಲ್ ಲುಕ್‍ನಲ್ಲಿ ಮಿಂಚುತ್ತಿದ್ದು, ಫ್ಯಾನ್ಸ್ ಗಳಿಗೆ ತಮ್ಮ ಖಡಕ್ ಡೈಲಾಗ್‍ಗಳಿಂದ ಭರಪೂರ ಮನರಂಜನೆ ನೀಡಿದ್ದಾರೆ. ಟ್ರೇಲರ್ ನಲ್ಲಿ ಪವನ್ ಕಲ್ಯಾಣ್ ನೋಡುಗರಲ್ಲಿ ಭರವಸೆಯನ್ನು ಮೂಡಿಸಿದ್ದಾರೆ.
ಚಿತ್ರ ಮಾಸ್, ಸೆಂಟಿಮೆಂಟ್, ರೊಮ್ಯಾಂಟಿಕ್ ಕಥೆಯನ್ನು ಹೊಂದಿದೆ. ಟ್ರೇಲರ್ ಮಧ್ಯ ಮಧ್ಯ ಕಾಮಿಡಿ ಪಂಚ್‍ಗಳ ಮೂಲಕ ಲವರ್ ಇಮೇಜ್‍ನ್ನು ಪವನ್ ಉಳಿಸಿಕೊಂಡಿದ್ದಾರೆ. ಬರೋಬ್ಬರಿ 1 ನಿಮಿಷ 30 ಸೆಕೆಂಡ್‍ಗಳಿರುವ ಟ್ರೇಲರ್ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುವುದಿಲ್ಲ. ಟ್ರೇಲರ್ ಖಡಕ್ ಡೈಲಾಗ್‍ನಿಂದ ಆರಂಭಗೊಳ್ಳುತ್ತದೆ. ಜೀವನದಲ್ಲಿ ಏನೇ ವಸ್ತುವನ್ನು ಪಡೆದುಕೊಳ್ಳಬೇಕಾದ್ರೆ ಅದಕ್ಕೊಂದು ಮಿನಿ ಯುದ್ಧವೇ ನಡೆಯುತ್ತದೆ ಅಂತಾ ಹೇಳುವ ಮೂಲಕ ಸಿನಿಮಾದಲ್ಲಿ ಆ್ಯಕ್ಷನ್ ಸೀನ್‍ಗಳಿವೆ ಅಂತಾ ಸುಳಿವು ನೀಡಿದ್ದಾರೆ. ಇನ್ನೂ ಮಧ್ಯೆ ಪವನ್ ಹಗ್ ಮಾಡಿಲ್ಲ, ಜಸ್ಟ್ ಹಿಡ್ಕೊಂಡಿದ್ದೀನಿ ಎನ್ನುವ ಕ್ಯಾಚಿ ಡೈಲಾಗ್ ನ್ನು ಹೊಂದಿದೆ.
ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪವನ್ ಕಲ್ಯಾಣ್ ಮೂರನೇ ಬಾರಿಗೆ ಜೊತೆಯಾಗಿದ್ದಾರೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ಮತ್ತು ಅನು ಇಮ್ಯಾನೇಯಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಪವನ್ ಮತ್ತು ತ್ರಿವಿಕ್ರಮ್ ಇಬ್ಬರು ಜೊತೆಯಾಗಿ ಜಲ್ಸಾ, ಅತ್ತಾರಿಂಟಿಕಿ ದಾರೇದಿ ಎರಡು ಬ್ಲಾಕ್ ಬಾಸ್ಟರ್ ಸಿನಿಮಾಗಳನ್ನು ನೀಡಿದ್ದು, ಮೂರನೇ ಸಿನಿಮಾ ಟಾಲಿವುಡ್ ನಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.
ಪವನ್ ಕಲ್ಯಾಣ್ ನಂತರ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಆದಿ ಎಲ್ಲರನ್ನು ಆಕರ್ಷಿಸುತ್ತಾರೆ. ಹಿರಿಯ ನಟರಾದ ಬೊಮನ್ ಇರಾನಿ, ಖುಷ್ಬು, ಕನ್ನಡತಿ ಪವಿತ್ರಾ ಲೋಕೇಶ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿದೆ. ಇದೇ ತಿಂಗಳು 10ನೇ ತಾರೀಖಿನಂದು ಚಿತ್ರ ಬಿಡುಗಡೆಯಾಗಲಿದೆ.