ಅಗ್ನಿಸಾಕ್ಷಿ (Agnisakshi), ನಮ್ಮ ಲಚ್ಚಿ ಸೀರಿಯಲ್ (Namma Lacchi Serial) ಮೂಲಕ ಗಮನ ಸೆಳೆದ ವಿಜಯ್ ಸೂರ್ಯ (Vijay Suriya) ಇದೀಗ ಅಮ್ಮಂದಿರ ದಿನಾಚರಣೆಯಂದು (ಮೇ 12) ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ತಾಯಿಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.
ಇನ್ನೂ ಬೆಳಗಿದೆ. ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ ಎಂದು ಎಂ. ಆರ್ ಕಮಲಾ ಅವರು ಬರೆದ ಈ ಸಾಲನ್ನು ಮನದಲ್ಲಿ ನೆನೆಯುತ್ತಾ ಅಮ್ಮನಿಗೊಂದು ಭಾವುಕ ನಮನ ಸಲ್ಲಿಸುತ್ತೇನೆ ಎಂದು ವಿಜಯ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಶರ್ಟ್ ಹರಿದ ಅಭಿಮಾನಿಗಳು- ಅಷ್ಟಕ್ಕೂ ಆಗಿದ್ದೇನು?
View this post on Instagram
ಇಷ್ಟು ಹೇಳಿದರೆ ಸಾಕಾ.ಅಮ್ಮ ಪ್ರತಿ ಕ್ಷಣದ ಮಿಡಿತ ಅಲ್ವಾ? ಈ ಪ್ರಶ್ನೆ ನನ್ನನ್ನು ಸದಾ ಕಾಡಿದೆ ಇದಕ್ಕೆ ಉತ್ತರ ಹುಡುಕಲು ಹೊರಟಾಗ ಅನ್ನಿಸಿದ್ದು, ನನ್ನ ಹೆಸರಿನಲ್ಲಿ ಅಮ್ಮನ ಹೆಸರು ಬೆರೆತರೆ ಹೇಗೆ ಎಂಬ ಭಾವ. ಅದನ್ನು ಅಳವಡಿಸಿಕೊಳ್ಳಲು ಅಮ್ಮಂದಿರ ದಿನಕ್ಕಿಂತ ವಿಶೇಷ ಸಂದರ್ಭ ಯಾವುದಿದೆ ಅಲ್ವಾ ಎಂದು ವಿಜಯ್ ಕೇಳಿದ್ದಾರೆ.
ಇಂದಿನಿಂದ ನಾನು ನನ್ನ ಹೆಸರನ್ನು ವಿಜಯ್ ಲಲಿತಾ ಸೂರ್ಯ ಎಂದು ಬದಲಿಸಿಕೊಳ್ಳುತ್ತಿದ್ದೇನೆ. ಲಲಿತಾ ನನ್ನ ಅಮ್ಮನ ಹೆಸರು.ನನ್ನ ಪಾಲಿನ ಉಸಿರು. ಜಗತ್ತಿನ ಎಲ್ಲ ಅಮ್ಮಂದಿರಿಗೂ ನನ್ನ ಶುಭಾಶಯಗಳು. ನಿಮ್ಮವನು ‘ವಿಜಯ್ ಲಲಿತಾ ಸೂರ್ಯ’ ಎಂದು ‘ಅಗ್ನಿಸಾಕ್ಷಿ’ ನಟ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಮ್ಮನ ಮೇಲಿನ ವಿಜಯ್ ಪ್ರೀತಿ, ಮಮಕಾರ ನೋಡಿ ಅಭಿಮಾನಿಗಳು ಹಾಡಿಹೊಗಳಿದ್ದಾರೆ. ಸದ್ಯ ವಿಜಯ್ ಹೊಸ ಪೋಸ್ಟ್ ವೈರಲ್ ಆಗಿದೆ.