ರಾಯಚೂರು: ದೇಹದಂಡನೆಯ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸುವ ರಾಯಚೂರಿನ ಬೃಹಸ್ಪತಿವಾರಪೇಟೆಯ ಶ್ರೀ ವೀರಭದ್ರೇಶ್ವರ ಉತ್ಸವ ಈ ಬಾರಿಯೂ ವಿಜೃಂಭಣೆಯಿಂದ ನಡೆಯುತ್ತಿದೆ.
ಪ್ರತಿವರ್ಷದಂತೆ ಈ ಬಾರಿಯೂ ಕೂಡ ಭಕ್ತಾದಿಗಳು ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಕೆಂಡ ಹಾಯುವ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ವಯಸ್ಸಿನ ಭೇದವಿಲ್ಲದೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಗ್ನಿ ಕುಂಡ ಹಾಯುವ ಮೂಲಕ ಭಕ್ತಿ ಸಮರ್ಪಿಸಿದರು. ಇನ್ನೂ ಕೆಲ ಭಕ್ತಾದಿಗಳು ಉದ್ದನೆಯ ಶಸ್ತ್ರಗಳನ್ನು ಬಾಯಿಗೆ ಹಾಕಿಸಿಕೊಳ್ಳುವುದರ ಮೂಲಕ ಪ್ರಾರ್ಥನೆ ಸಲ್ಲಿಸಿದರು.
Advertisement
Advertisement
ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ 9 ದಿನಗಳವರೆಗೆ ಶ್ರೀ ವೀರಭದ್ರೇಶ್ವರ ಸನ್ನಿಧಿಯಲ್ಲಿ ಪುವಂತಿಕೆ, ನಂದಿಕೋಲು, ಒಡಪು, ಮಹಿಳೆಯರಿಂದ ಕಳಸ, ಅಗ್ನಿ ಕುಂಡ, ಪಲ್ಲಕ್ಕಿ ಮೊದಲಾದ ಸೇವೆಗಳು ನಡೆಯಲಿದ್ದು, ಇಂದು ಉಚ್ಚಾಯ ಮಹೋತ್ಸವ ನಡೆಯಲಿದೆ. ದೇವಾಲಯದ ಆವರಣದಲ್ಲಿ ನಡೆದ ವಿಶೇಷವಾದ ವೀರಗಾಸೆಯವರ ಒಡಪುಗಳ ಸೇವೆ ನೋಡಿ ಜನರು ಬೆರಗಾದರು. ಇಂದು ಬೆಳಗ್ಗಿನ ಜಾವ 4 ಗಂಟೆಯಿಂದ ಅಗ್ನಿಕುಂಡ ಸೇವೆ ಆರಂಭವಾಗಿದ್ದು, ನೂರಾರು ಜನ ಭಕ್ತರು ಕೆಂಡ ಹಾದು ತಮ್ಮ ಹರಕೆ ತೀರಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv