ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

Public TV
2 Min Read
Modi 4

– ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಸಂಸತ್‌ ಭವನದಲ್ಲಿ ಸೋಮವಾರದಿಂದ (ಡಿ.4) ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಇತರ ಕೇಂದ್ರ ಸಚಿವರು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.

ನರೇಂದ್ರ ಮೋದಿ ಅವರು ಸಂಸತ್‌ ಭವನ ಪ್ರವೇಶಿಸುತ್ತಿದ್ದಂತೆ ಕೇಂದ್ರ ಸಚಿವರು ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: Cyclone Michaung- ನೆಲ್ಲೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಲಕ ದುರ್ಮರಣ

4 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಜನರು ನಕಾರಾತ್ಮಕತೆಯನ್ನ (ನೆಗೆಟಿವಿಟಿ) ತಿರಸ್ಕರಿಸಿದ್ದಾರೆ ಅನ್ನೋದು ತೋರಿಸುತ್ತೆ. ಈ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.

ಮುಂದುವರಿದು, ಎಲ್ಲ ಸಂಸದರು ಪೂರ್ವಸಿದ್ಧತೆಯೊಂದಿಗೆ ಸಂಸತ್ತಿಗೆ ಬರಬೇಕೆಂದು ನಾನು ವಿನಂತಿಸುತ್ತೇನೆ. ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ನಾನು ಪ್ರತಿಪಕ್ಷಗಳಿಗೆ (Oppositions) ಇದೊಂದು ಸುವರ್ಣಾವಕಾಶವೆಂದೇ ಹೇಳುತ್ತೇನೆ. ಕಳೆದ 9 ವರ್ಷಗಳಿಂದ ಹೊಂದಿರುವ ನಕಾರಾತ್ಮಕತೆಯನ್ನು ಈಗಲಾದರೂ ತೊಡೆದುಹಾಕಬೇಕು. ಸಕಾರಾತ್ಮಕತೆಯಿಂದ (Positivity) ಮುಂದುವರಿಯಬೇಕು, ಹಾಗಾಗಿ ದಯವಿಟ್ಟು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ಹೊರಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಸಂಸತಿನಲ್ಲಿ ಪ್ರತಿಭಟನೆಗಿಳಿಯಬಾರದು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳು ಮಹತ್ವದ ಪಾತ್ರ ಹೊಂದಿವೆ. ದೇಶವು ಅಭಿವೃದ್ಧಿಯ ಅರ್ಧದಾರಿಯಲ್ಲಿ ನಿಲ್ಲಲು ಬಯಸುವುದಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್

ಸದನದಲ್ಲಿ ನಿಮ್ಮ ಸಹಕಾರ ತುಂಬಾ ಅಗತ್ಯ. ನೀವು ದೇಶಕ್ಕಾಗಿ ಧನಾತ್ಮಕ ಸಂದೇಶ ನೀಡಿದ್ರೆ, ಅದು ನಿಮಗೂ ಪ್ರಯೋಜನಕಾರಿ. ನೆಗೆಟಿವಿಟಿ ಪ್ರಜಾಪ್ರಭುತ್ವಕ್ಕೂ ಒಳ್ಳೆಯದಲ್ಲ. ನಿಮ್ಮ ಪ್ರತಿಕ್ರಿಯೆಗಳು ದ್ವೇಷ ಮತ್ತು ನಕಾರಾತ್ಮಕತೆಯಿಂದ ಕೂಡಿದ್ದರೆ ಮಾರಕವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪರ-ವಿರೋಧ ಎರಡೂ ಸಮಾನ ಸಾಮರ್ಥ್ಯ ಹೊಂದಿರಬೇಕು ಎಂದು ತಿಳಿವಳಿಕೆ ನೀಡಿದ್ದಾರೆ.

Share This Article