ಮಡಿಕೇರಿ: ಭಾರೀ ಮಳೆಯಿಂದಾಗಿ ಕೊಡಗಿನ ರಾಮಕೋಲ್ಲಿಯಲ್ಲಿ ಜಲಸ್ಫೋಟ ಸಂಭವಿಸಿದೆ.
Advertisement
ಹೌದು. ನಿರಂತರ ಮಳೆಯಿಂದಾಗಿ ಈಗಾಗಲೇ ಕೊಡಗು ಜನತೆ ತತ್ತರಿಸಿಹೋಗಿದ್ದಾರೆ. ಈ ನಡುವೆ ಕೊಡಗಿನ ರಾಮಕೋಲ್ಲಿಯಲ್ಲಿ ಜಲಸ್ಫೋಟಗೊಂಡಿದ್ದು, 25 ಎಕರೆಯಷ್ಟು ಪ್ರದೇಶದ ಬೆಟ್ಟ ಬಿರುಕು ಬಿಟ್ಟಿದೆ. ಇದು ರಾಮಕೋಲ್ಲಿಯ ಜನತೆಯಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ
Advertisement
Advertisement
ಬೆಟ್ಟದಲ್ಲಿ ಉಂಟಾಗಿರುವ ಜಲಸ್ಫೋಟದಿಂದ ರಭಸವಾಗಿ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದ್ದು, ಕ್ಷಣ, ಕ್ಷಣಕ್ಕೂ ನೀರು ಹೆಚ್ಚಾಗುತ್ತಿದೆ. ರಾಮಕೋಲ್ಲಿ ಪ್ರದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಜಲಸ್ಫೋಟ ಕಂಡು ಇದೀಗ ಭಯಭೀತರಾಗಿದ್ದಾರೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು
Advertisement
ಈ ಹಿಂದೆ 2018 ರಲ್ಲೂ ಕೊಡಗಿನಲ್ಲಿ ಇದೇ ರೀತಿ ಜಲಸ್ಫೋಟವಾಗಿತ್ತು. ಮೇಲಿನಿಂದ ಗುಡ್ಡವೇ ಕುಸಿದಿತ್ತು. ಗುಡ್ಡದಿಂದ ಭಾರೀ ಪ್ರಮಾಣದ ನೀರು ಹರಿದು ಬಂದು ರಸ್ತೆಯೇ ಕೊಚ್ಚಿ ಹೋಗಿತ್ತು.