ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಮ್ಮೆ ಕಿತ್ತಾಡಿಕೊಂಡಿದ್ದಾರೆ.
ವಿಳಾಸದ ವಿಚಾರವಾಗಿ ಈ ಬಾರಿ ಮಾಜಿ ಮುಖ್ಯಮಂತ್ರಿಗಳು ಪರಸ್ಪರ ಟ್ವಿಟ್ಟರ್ ವಾರ್ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಡಿವಿಎಸ್ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸದಾನಂದ ಗೌಡರ ಸಾಧನೆ ಏನು ಕೇಳಿದ್ದರು.
Advertisement
ಇದಕ್ಕೆ ಟ್ವೀಟ್ ಮಾಡಿರುವ ಡಿವಿಎಸ್, “ಮಾನ್ಯ ಸಿದ್ದರಾಮಯ್ಯನವರೇ ನನ್ನ ಸಾಧನೆ ಏನೆಂದು ತಿಳಿಸಲು ನಿಮ್ಮ ಅಡ್ರೆಸ್ ಕೇಳಿದ್ದೆ. ಆದರೆ ಅದು ನಿಮಗಿಲ್ಲ. ಹಾಗಾಗಿ ನೀವು ಕೊಡಲಿಲ್ಲ, ನೀವು ಊರಿಗೂ ಅರಸನಲ್ಲ, ಹೆತ್ತೂರಿಗೆ ಮಗನೂ ಅಲ್ಲ. ಒಂದು ರೀತಿ ರಾಜಕೀಯ ಪರಿತ್ಯಾಜ್ಯ ನೀವು, ಹಾಗಾಗಿ ನಿಮಗೆ ಅಡ್ರೆಸ್ಸಿಲ್ಲ” ಎಂದು ಹೇಳಿದ್ದಾರೆ.
Advertisement
ಮಾನ್ಯ ಸಿದ್ದರಾಮೈಯ್ಯನವರೇ ನನ್ನ ಸಾಧನೆ ಏನೆಂದು ತಿಳಿಸಲು ನಿಮ್ಮ ಅಡ್ರೆಸ್ ಕೇಳಿದ್ದೆ . ಆದರೆ ಅದು ನಿಮಗಿಲ್ಲ . ಹಾಗಾಗಿ ನೀವು ಕೊಡಲಿಲ್ಲ , ನೀವುಊರಿಗೂ ಅರಸನಲ್ಲ , ಹೆತ್ತೂರಿಗೆ ಮಗನೂ ಅಲ್ಲ . ಒಂತರ ರಾಜಕೀಯ ಪರಿತ್ಯಾಜ್ಯ ನೀವು , ಹಾಗಾಗಿ ನಿಮಗೆ ಅಡ್ರೆಸ್ಸಿಲ್ಲ .
— Sadananda Gowda (@DVSadanandGowda) April 5, 2019
Advertisement
ಸದಾನಂದ ಗೌಡರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಸುಳ್ಯದಲ್ಲಿ ಜನಿಸಿ, ಪುತ್ತೂರಿನಲ್ಲಿ ಚುನಾವಣೆಗೆ ನಿಂತು, ಅಲ್ಲಿಂದ ಉಡುಪಿಗೆ ಕಾಲ್ಕಿತ್ತು, ಅಲ್ಲಿಂದ ಬೆಂಗಳೂರಿಗೆ ಬಂದಿರುವ ನಿಮಗೆ ಸ್ವಂತ ವಿಳಾಸವಿದೆಯಾ ಸದಾನಂದ ಗೌಡರೇ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಈ ಹಿಂದೆ ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಿಸಿದ್ದ ಸಚಿವರು, “ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕ್ಕೊಳ್ಳಲು ಇದೊಂದು ಹೊಸ ಪ್ರಹಸನ” ಎಂದು ತಿರುಗೇಟು ನೀಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಎಷ್ಟೆಂದರೂ ನೀವು 11 ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿ ಹೋದವರಲ್ಲವೇ ಎಂದು ವ್ಯಂಗ್ಯವಾಡಿದ್ದರು.
ಸುಳ್ಯದಲ್ಲಿ ಜನಿಸಿ, ಪುತ್ತೂರಿನಲ್ಲಿ ಚುನಾವಣೆಗೆ ನಿಂತು, ಅಲ್ಲಿಂದ ಉಡುಪಿಗೆ ಕಾಲ್ಕಿತ್ತು, ಅಲ್ಲಿಂದ ಬೆಂಗಳೂರಿಗೆ ಬಂದಿರುವ ನಿಮಗೆ ಸ್ವಂತ ವಿಳಾಸವಿದೆಯಾ ಸದಾನಂದ ಗೌಡರೇ? https://t.co/wV98wsfKtc
— Siddaramaiah (@siddaramaiah) April 6, 2019
ಡಿವಿಎಸ್ ಪತ್ನಿಯಿಂದ ಮತಪ್ರಚಾರ:
ಇತ್ತ ದಿನ ಕಳೆದಂತೆ ಲೋಕಸಭಾ ಚುನಾವಣೆಯ ರಂಗು ಹೆಚ್ಚಾಗುತ್ತಿದೆ, ಇತ್ತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಪರ ಗೌಡರ ಪತ್ನಿ ಡಾಟಿ ಸದಾನಂದಗೌಡ ಚುನಾವಣಾ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಹೊರವಲಯ ದಾಸರಹಳ್ಳಿ ವಿಧಾನಸಭಾ ವ್ಯಾಪ್ತಿಯ ಹಲವೆಡೆ ಮತ ಪ್ರಚಾರ ನಡೆಸಿದ್ದಾರೆ.
ಪತಿಯ ಗೆಲುವಿಗಾಗಿ ಮನೆ ಮನೆಗೆ ತೆರಳಿದ ಡಾಟಿ ಸದಾನಂದಗೌಡ, ದಾಸರಹಳ್ಳಿ ಬಿಜೆಪಿ ಕಾರ್ಯಕರ್ತರ ಜೊತೆ ಸೇರಿ ಮತಯಾಚನೆ ನಡೆಸಿದರು. ಕೊಡಗು, ಚಿಕ್ಕಮಗಳೂರು, ಮಂಗಳೂರು, ದಕ್ಷಿಣ ಕನ್ನಡ ಭಾಗದ ದಾಸರಹಳ್ಳಿ ನಿವಾಸಿಗಳು ಡಾಟಿ ಸದಾನಂದಗೌಡಗೆ ಮತ ಪ್ರಚಾರದ ವೇಳೆಯಲ್ಲಿ ಸಾಥ್ ನೀಡಿದ್ದು ವಿಶೇಷವಾಗಿತ್ತು. ಪ್ರಧಾನಿ ನರೇಂದ್ರ ಮೋದಿರವರು ನೀಡಿದ ಜನಪ್ರಿಯ ಯೋಜನೆಗಳು ಹಾಗೂ ನಮ್ಮ ಪತಿ ಕ್ಷೇತ್ರದಲ್ಲಿ ನಡೆಸಿದ ಜನಪರ ಕಾಳಜಿ ಕೆಲಸಗಳೇ ಚುನಾವಣೆಯ ಗೆಲುವಿಗೆ ಅನುಕೂಲವಾಗಲಿದೆ ಎಂದು ಡಾಟಿ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.