ಉಡುಪಿ: ಜಿಲ್ಲೆಯ ಶಿರೂರು ಮೂಲ ಮಠದಲ್ಲಿ ನೈವೇದ್ಯ ಪೂಜೆ ಆರಂಭವಾಗಿದೆ. ಶಿರೂರು ಲಕ್ಷ್ಮೀವರ ತೀರ್ಥಶೀಗಳು ವೃಂದಾವನಸ್ಥರಾದ ಹಿನ್ನೆಲೆಯಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳನ್ನು ನಿಲ್ಲಿಸಲಾಗಿತ್ತು.
ಹಿರಿಯಡ್ಕ ಸಮೀಪದ ಮೂಲ ಮಠದಲ್ಲಿ ಇಂದಿನಿಂದ ದೈನಂದಿನ ಪೂಜೆ ಆರಂಭವಾಗಿದೆ. ಮುಖ್ಯ ಪ್ರಾಣ ಮತ್ತು ಮೂಲ ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಲಾಗಿದೆ. ಸ್ಚಾಮೀಜಿ ಇದ್ದಾಗ ಪ್ರತಿದಿನ 4 ಸೇರು ಅಕ್ಕಿಯ ನೈವೇದ್ಯ ದೇವರಿಗೆ ಅರ್ಪಣೆಯಾಗುತ್ತಿತ್ತು. ಮೂರು ಹೊತ್ತು ಪೂಜೆ ನಡೆಯುತ್ತಿತ್ತು.
Advertisement
ಸ್ವಾಮೀಜಿಯ ಸಾವಿನ ನಂತರ ಕಳೆದ 7 ದಿನಗಳ ಕಾಲ ಕೇವಲ ಆರತಿಯನ್ನು ಎತ್ತಿ ದೇವರಿಗೆ ಪೂಜೆ ಆಗುತ್ತಿತ್ತು. ದೇವರಿಗೆ ನೈವೇದ್ಯ ಸಹಿತ ಎಲ್ಲಾ ಪೂಜೆಗಳು ಇಂದಿನಿಂದ ಶುರುವಾಗಿದೆ. ಆದರೆ ಶಿರೂರು ಮೂಲ ಮಠದ ಅರ್ಚಕರು, ಮಠದ ಸಿಬ್ಬಂದಿಗಳಿಗೆ ಮಾತ್ರ ಮಠದೊಳಗೆ ಪ್ರವೇಶ ನೀಡಲಾಗಿದೆ.
Advertisement
ಮೂಲ ಮಠದ ಸುತ್ತಲೂ ಪೊಲೀಸ್ ಭದ್ರತೆಯಿದೆ. ಉಡುಪಿಯಲ್ಲಿರುವ ಶಿರೂರು ಮಠದಲ್ಲೂ ನೈವೇದ್ಯ ಸಹಿತ ಪೂಜೆ ಇಂದಿನಿಂದ ಶುರುವಾಗಿದೆ.