ಮಡಿಕೇರಿ: ದಸರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಕಂಜನ್ (Kanjan Elephant) ಮತ್ತು ಧನಂಜಯ ಆನೆಗಳು ಮತ್ತೆ ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಕಾದಾಟ ನಡೆಸಿವೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಯ ಭಾಗವಾಗಿದ್ದ ಧನಂಜಯ ಆನೆ (Dhananjaya Elephant), ಕಂಜನ್ ಆನೆಯನ್ನು ಅಟ್ಟಾಡಿಸಿತ್ತು. ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿದ್ದರು. ಈ ಘಟನೆ ಮಾಸುವ ಮುನ್ನವೇ ಧನಂಜಯ ಹಾಗೂ ಕಂಜನ್ ಮತ್ತೆ ಕಾದಾಟ ನಡೆಸಿವೆ. ಇದನ್ನೂ ಓದಿ: ಸಂಸದ ಸುಧಾಕರ್ ಬಾಗಿನ ಅರ್ಪಣೆಗೆ ಆಗಮಿಸುವಷ್ಟರಲ್ಲಿ ಹೆಜ್ಜೇನು ದಾಳಿ – ನಗರಸಭಾ ಸದಸ್ಯರು ಸೇರಿ ಹಲವರು ಆಸ್ಪತ್ರೆಗೆ ದಾಖಲು
Advertisement
Advertisement
ಹೌದು. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿಂದು ಧನಂಜಯ ಆನೆ ಮತ್ತು ಕಂಜನ್ ಅನೆಗಳು ಮತ್ತೆ ಶಿಬಿರದಲ್ಲಿ ಫೈಟ್ ಮಾಡಿಕೊಂಡಿವೆ. ಬೆಳಗ್ಗೆ ಧನಂಜಯ ಆನೆ ಮತ್ತು ಕಂಜನ್ ಆನೆ ಶಿಬಿರದ ಒಳಗೆ ಹೋಗುವ ಸಂದರ್ಭ ಎರಡು ಅನೆಗಳು ಮುಖಾಮುಖಿಯಾಗಿವೆ. ದಿಢೀಋನೆ ಧನಂಜಯ ಆನೆ ಕಂಜನ್, ಆನೆ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಗಿದೆ. ಶಿಬಿರದ ಕಾಂಪೌಂಡ್ ಬಳಿ ತಳಿಕೊಂಡು ಹೋಗಿ ಸೊಂಡಿಲಿನಲ್ಲಿ ಕಂಜನ್ ಆನೆಗೆ ಹೋಡೆದು ನಂತರ ತನ್ನ ದಂತದಿಂದ ಬಾಲದ ಬಳಿ ತಿವಿದು ನಂತರ ಕಾಲಿಗೂ ತಿವಿದಿದೆ. ಹೀಗಾಗಿ ಕಂಜನ್ ಆನೆಗೆ ಕಾಲಿಗೆ ಗಂಭೀರ ಗಾಯವಾಗಿದೆ.
Advertisement
Advertisement
ಬೆಳಗ್ಗೆಯಿಂದಲ್ಲೂ ಮದದಲ್ಲಿ ಇದ್ದ ಧನಂಜಯನನ್ನು ನಿಯಂತ್ರಣ ಮಾಡಲು ಮಾವುತರು ಕಾವಾಡಿಗಳು ಪ್ರಯತ್ನ ಮಾಡಿದರು. ಅಲ್ಲದೇ ಶಿಬಿರದಲ್ಲಿ ನೂರಾರು ಪ್ರವಾಸಿಗರು ಇರುವ ಸಂದರ್ಭದಲ್ಲೇ ಸಾಕಾನೆಗಳ ಕಾದಾಟ ಆಗಿರುವುದರಿಂದ ಪ್ರವಾಸಿಗರು ಕೆಲ ನಿಮಿಷಗಳ ಕಾಲ ಆತಂಕಕ್ಕೆ ಒಳಗಾಗಿದ್ರು. ನಂತರ ಧನಂಜಯ ಆನೆಯನ್ನು ಮಾವುತರು ಕಾವೇರಿ ನದಿಯ ಬಳಿ ಕರೆದುಕೊಂಡು ಸರಪಳಿಯಿಂದ ಕಟ್ಟಿದ ನಂತರ ವಾತಾವರಣ ತಿಳಿಯಾಗಿದೆ ಎಂದು ಅರಣ್ಯ ಇಲಾಖೆಯ ಆದಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್