ವಿಜಯಪುರ: ಜಿಲ್ಲೆಯಲ್ಲಿ ವಕ್ಫ್ ದಂಗಲ್ ಕಿಚ್ಚು ಹತ್ತಿ ರಾಜ್ಯಾದ್ಯಂತ ವ್ಯಾಪಿಸಿತ್ತು. ಇದೀಗ ಜಿಲ್ಲೆಯಲ್ಲಿ ಬಿಪಿಎಲ್ (BPL) ದಂಗಲ್ ಶುರುವಾಗಿದೆ. ರಾಜ್ಯ ಸರ್ಕಾರ ಮತ್ತೊಂದು ಯಡವಟ್ಟು ಮಾಡಿ, ಬಡಜನರ ಕೆಂಗಣ್ಣಿಗೆ ಗುರಿಯಾಗಿದೆ.
ವಿಜಯಪುರದಲ್ಲಿ (Vijayapura) ವಕ್ಫ್ ದಂಗಲ್ ಮುಗಿಯುವ ಮುನ್ನವೇ ಬಿಪಿಎಲ್ ಕಾರ್ಡ್ ಸಮಸ್ಯೆ ಶುರುವಾಗಿದೆ. ಜಿಲ್ಲೆಯಲ್ಲಿ ಒಟ್ಟು 4,359 ಬಿಪಿಎಲ್ ಕಾರ್ಡ್ ರದ್ದಾಗಿವೆ. ಐಟಿ ರಿಟರ್ನ್ ಮಾಡಿದ 1,932 ಜನರು ಸೇರಿದಂತೆ ಸರ್ಕಾರಿ ನೌಕರರ 1,71,012 ರೂ. ಗಿಂತ ಹೆಚ್ಚು ಆದಾಯ ಹೊಂದಿರುವ 2,256 ಜನರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಆದರೆ ಇದರಲ್ಲಿ ಕೆಲ ಬಡ ಜನರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಇದನ್ನೂ ಓದಿ: ಉಡುಪಿಯ ಕಬ್ಬಿನಾಲೆಯಲ್ಲಿ ಎನ್‌ಕೌಂಟರ್ – ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆ
ನಗರದ ಜಾಡರ ಓಣಿಯ ಮುಸ್ಲಿಂ ಬಡ ಕುಟುಂಬ ಅನವರಬೀ ಗಿರಗಾವ ಎಂಬುವವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಅನವರಬೀ ಅವರ ಪತಿ ಹಾಸಿಂಸಾಬ ಗಿರಗಾವ ಕಳೆದ 7 ವರ್ಷ ಹಿಂದೆ ತೀರಿ ಹೋಗಿದ್ದಾರೆ. ಸದ್ಯ ಅನವರಬೀ ಮಗ ಮೋತಿಲಾಲ ಸೇರಿದಂತೆ 7 ಜನರು ಕುಟುಂಬಸ್ಥರು ಇದ್ದಾರೆ. ಅನವರಬೀ ಮಗ ಮೋತಿಲಾಲ ಬಟ್ಟೆ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾನೆ.
ಮನೆಯಲ್ಲಿ ಉಳಿದರ‍್ಯಾರು ಕೆಲಸ ಮಾಡಲ್ಲ. ಬಿಪಿಎಲ್ ಕಾರ್ಡ್‌ನ ರೇಷನ್‌ನಿಂದ, ಗೃಹಲಕ್ಷ್ಮಿಯ ಹಣದಿಂದ ಬಡ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ 15 ವರ್ಷದ ಕೆಳಗೆ ಅನವರಬೀ ಅವರ ಪತಿ ಹಾಸಿಂಸಾಬ ಮಾರುಕಟ್ಟೆಯ ರಸ್ತೆ ಬದಿ ಬಟ್ಟೆ ವ್ಯಾಪರ ಮಾಡುತ್ತಿದ್ದರಂತೆ. ಯಾರೋ ಹೇಳಿದ್ದಕ್ಕೆ ಜಿಎಸ್‌ಟಿ ಕಟ್ಟಿದ್ದರಂತೆ. ಈಗ ಜಿಎಸ್‌ಟಿ ಕಟ್ಟಿದ ಆಧಾರದ ಮೇಲೆ ಇವರ ಬಿಪಿಎಲ್ ಕಾರ್ಡ ರದ್ದಾಗಿದೆ ಎಂದು ಹೇಳಿದ್ದಾರೆ.
ಮನೆಗೆ ಬಂದು ಸರಿಯಾಗಿ ಪರಿಶೀಲನೆ ಮಾಡದೆ ಏಕಾಏಕಿ ನಮ್ಮ ಕಾರ್ಡ್ ರದ್ದು ಮಾಡಿರುವುದು ವಿಪರ್ಯಾಸ. ಬಿಪಿಎಲ್ ಕಾರ್ಡ್ ರೇಷನ್ ನಂಬಿ ಬದುಕುತ್ತಿದ್ದ ಜನರು ಮುಂದೆ ಜೀವನ ಸಾಗಿಸುವುದು ಕಷ್ಟ ಎಂದು ರಾಜ್ಯ ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 19-11-2024