ರಜನಿಕಾಂತ್ (Rajinikanth) ನಟನೆಯ ‘ಜೈಲರ್ 2’ (Jailer 2) ಸಿನಿಮಾದಲ್ಲಿ ಮಲ್ಟಿ ಸ್ಟಾರ್‌ಗಳು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮತ್ತೆ ಶಿವಣ್ಣ ನಟಿಸೋದು ಅಧಿಕೃತವಾಗಿದೆ. ಈ ಬೆನ್ನಲ್ಲೇ ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಕೂಡ ತಲೈವಾ ಜೊತೆ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಪೊರಕೆ ಹಿಡಿದು ಹೊಸ ಅವತಾರದಲ್ಲಿ ಯುವ ಎಂಟ್ರಿ- ‘ಎಕ್ಕ’ ಚಿತ್ರದ ಟೀಸರ್ ಔಟ್
ಕೇರಳದಲ್ಲಿ ‘ಜೈಲರ್ 2’ಗಾಗಿ ತಲೈವಾ ಟೀಮ್ ಕೆಲದಿನಗಳಿಂದ ಬೀಡು ಬಿಟ್ಟಿದೆ. ಸದ್ಯದಲ್ಲೇ ಶಿವಣ್ಣ ಕೂಡ ಈ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಿರುವಾಗ ಈ ಸಿನಿಮಾ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಸಿನಿಮಾದ ಪಾತ್ರವೊಂದಕ್ಕಾಗಿ ನಟಿಸಲು ಚಿತ್ರತಂಡ ‘ಪುಷ್ಪ 2’ (Pushpa 2) ಖ್ಯಾತಿಯ ಫಹಾದ್ ಫಾಸಿಲ್ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಕಥೆ ಮತ್ತು ಪಾತ್ರದ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹರಿದಾಡುತ್ತಿರುವ ಈ ಸುದ್ದಿ ನಿಜನಾ, ಈ ಚಿತ್ರದಲ್ಲಿ ಅವರು ನಟಿಸುತ್ತಾರಾ ಎಂಬುದನ್ನು ಚಿತ್ರತಂಡವೇ ಅಫಿಷಿಯಲ್ ಆಗಿ ತಿಳಿಸಬೇಕಿದೆ. ಇದನ್ನೂ ಓದಿ:ಕೇರಳದಲ್ಲಿ ತಲೈವಾ- ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಜೈಕಾರ
ಈಗಾಗಲೇ ‘ವೆಟ್ಟೈಯಾನ್’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಫಹಾದ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಹೈಲೆಟ್ ಆಗಿತ್ತು. ಹಾಗಾಗಿ ‘ಜೈಲರ್ 2’ನಲ್ಲಿಯೂ ಫಹಾದ್ ನಟಿಸಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.