ಬೆಂಗಳೂರು: ಟ್ರೋಲ್‌ನಿಂದ (Troll) ನನ್ನ ಕನ್ನಡ ಮತ್ತಷ್ಟು ಸ್ಪಷ್ಟವಾಗಲಿದೆ ಎಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ (UT Khader) ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನನ್ನ ಕನ್ನಡದ (Kannada) ಬಗ್ಗೆ ಟ್ರೋಲ್ ಮಾಡುವವರು ಮಾಡಲಿ. ಸಹಜವಾಗಿ ಕರಾವಳಿ ಪ್ರದೇಶದವರಾದ ನಾವು ತುಳು (Tulu) ಭಾಷೆ ಮಾತನಾಡುವವರು ಸಿಕ್ಕಿದಾಗ ತುಳುವಿನಲ್ಲೇ ಮಾತಾಡುತ್ತೇವೆ. ಅವರ ಟ್ರೋಲ್‌ನಿಂದಾಗಿ ನನ್ನ ಕನ್ನಡ ಇನ್ನಷ್ಟು ಚೆನ್ನಾಗಿ ಸ್ಪಷ್ಟವಾಗಲಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಪಾಕಿಸ್ತಾನ ತಂಡದಲ್ಲಿ ಎಲ್ಲರೂ ಉತ್ತಮ ಬೌಲರ್‌ಗಳೇ – ರೋಹಿತ್ ಶರ್ಮಾ
Advertisement
Advertisement
ಶಾಸಕರನ್ನು ಅಮಾನತು ಮಾಡಿದ್ದು ಸರಿಯೇ ಎಂದು ಕೇಳಲಾದ ಪ್ರಶ್ನೆಗೆ, ಸಂವಿಧಾನ ಪ್ರಕಾರ ನಾನು ನಡೆದುಕೊಂಡಿದ್ದೇನೆ. ಸದನ ಮುಗಿಯುವ ತನಕ ಶಾಸಕರ ಅಮಾನತು ಇತ್ತು. ಈಗ ಸದನ ಮುಗಿದಿದೆ. ಮತ್ತೆ ಚರ್ಚೆ ಬೇಡ ಎಂದರು.
Advertisement
ಶಾಸಕರ ತರಬೇತಿ ಶಿಬಿರಕ್ಕೆ ರವಿಶಂಕರ್ ಗುರೂಜಿಗೆ (Ravi Shankar Guruji) ಆಹ್ವಾನ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಎಡವೂ ಅಲ್ಲ, ಬಲವೂ ಅಲ್ಲ. ಕಷ್ಟದಲ್ಲಿರುವ ಎಡ, ಬಲ ಪರ ಇದ್ದೇನೆ. ಕಷ್ಟದಲ್ಲಿರುವ ಇಬ್ಬರನ್ನ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಅಂದು ನೂತನ ಶಾಸಕರಿಗೆ ಯಾರಿಗೂ ವಿರೋಧ ಇರಲಿಲ್ಲ, ಸಾಮಾಜಿಕ ಜಾಲತಾಣದಲ್ಲಿ ವಿರೋಧ ಮಾಡಿದರು. ಹೊರಗೆ ಕೆಲವರು ವಿರೋಧ ಮಾಡಿದರು. ಈಗ ಶಿಬಿರವೂ ಮುಗಿದು ಹೋಯ್ತಲ್ಲ ಬಿಡಿ ಎಂದರು.
Advertisement
Web Stories