ಮೈಸೂರು: ನಾನು ರಾಜ್ಯ ಕಾಂಗ್ರೆಸ್ ನಾಯಕರ ನೆರವಿಲ್ಲದೆ ಕಾಂಗ್ರೆಸ್ ಸೇರಿದ್ದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ ಮಾಜಿ ಸಂಸದ ಎಚ್. ವಿಶ್ವನಾಥ್, ಉಪ ಚುನಾವಣೆ ಗೆಲುವಿನ ನಂತರ ಅವರು ಮನುಷ್ಯರ ರೀತಿ ವರ್ತಿಸುತ್ತಿಲ್ಲ. ನಾನು ಎಂಬ ಅಹಂಕಾರ ಅವರನ್ನು ತುಂಬಿದೆ ಅಂತಾ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಂತಹ ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಾನೊಬ್ಬ ದೊಡ್ಡಸುಳ್ಳುಗಾರ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕರ ಸಮ್ಮತಿ ಇಲ್ಲದೆ ಯಾರು ಪಕ್ಷ ಸೇರುವುದಕ್ಕೆ ಸಾಧ್ಯವಿಲ್ಲ ಅನ್ನೋದು ಕಾಮನ್‍ಸೆನ್ಸ್. ಸಿಎಂಗೆ ಕಾಮನ್‍ಸೆನ್ಸ್ ಕೂಡ ಇಲ್ವಾ ಎಂದು ಟೀಕಿಸಿದರು. ಕೃತಜ್ಞತೆ ಅನ್ನೋದನ್ನೆ ಸಿದ್ದರಾಮಯ್ಯ ಮರೆತಿದ್ದಾರೆ ಅಂತಾ ತಿರುಗೇಟು ನೀಡಿದರು.
Advertisement
ನಾನು ಸಿದ್ದರಾಮಯ್ಯ ಅವರಿಗಿಂತಾ ರಾಜಕೀಯದಲ್ಲಿ ಹಿರಿಯ. 1978 ರಲ್ಲಿ ನಾನು ಶಾಸಕನಾದೆ. ಆ ವೇಳೆ ಸಿದ್ದರಾಮಯ್ಯನವರು ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. ಬಹುತೇಕ ವರ್ಷ ನಾವಿಬ್ಬರು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ರಾಜಕೀಯ ಮಾಡಿದವರು. ನಂತರ, ಅವರು ಕಾಂಗ್ರೆಸ್ ಸೇರಿ ಪರಸ್ಪರ ಜೊತೆಯಾದೆವು. ರಾಜ್ಯದ ಕಾಂಗ್ರೆಸ್ ನಾಯಕರ ಶಿಫಾರಸ್ಸಿನ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದು. ಇದು ಕಾಮನ್ ಸೆನ್ಸ್, ನಿಮಗೆ ಕಾಮನ್ ಸೆನ್ಸ್ ಇದೆಯಾ ಇಲ್ಲ ನನಗೆ ಗೊತ್ತಿಲ್ಲ ಎಂದರು.
Advertisement
ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಪಾತ್ರ ಏನೂ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಒಂದು ಬಾರಿ ಹೆಲಿಕಾಪ್ಟರ್ ನಲ್ಲಿ ಜೊತೆಯಾಗಿ ಸುತ್ತೂರಿಗೆ ಬರುವಾಗ ಏನೇನೂ ಮಾತಾಡಿದ್ದರು ಅನ್ನೋದು ಗೊತ್ತಿದೆ. ಮುಂದಿನ ದಿನದಲ್ಲಿ ಅದು ಬಹಿರಂಗವಾಗುತ್ತೆ ಅಂತಾ ಕೂಡ ಹೊಸ ಬಾಂಬ್ ಸಿಡಿಸಿದರು.
Advertisement
ಇದನ್ನೂ ಓದಿ: ಬೈ ಎಲೆಕ್ಷನ್ ಬಳಿಕ ನೀವು ಫುಲ್ ಆಕ್ಟೀವ್ ಆಗಿದ್ದೀರಿ ಎಂದು ಕೇಳಿದ್ದಕ್ಕೆ ಸಿಎಂ ಉತ್ತರಿಸಿದ್ದು ಹೀಗೆ
Advertisement