ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಬದಲಾಯಿಸುವ ಸುಳಿವು ನೀಡಿದ್ದಾರೆ. 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತಿನಿ ಎಂದು ಮೈಸೂರಿನಲ್ಲಿ ನಡೆದ ಸಾರ್ವಜನಿಕ ಸಭೆ ಸಿಎಂ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದರಾಮಯ್ಯನವರು ಹ್ಯಾಪಿ ಮೂಡ್‍ನಲ್ಲಿದ್ದರು. ಸಮಾಧಾನದಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ 25 ನಿಮಿಷಗಳ ಕಾಲ ಮಾತನಾಡಿದರು. ಈ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಹಾಸ್ಯಭರಿತವಾಗಿ ಉತ್ತರಿಸಿದರು.
Advertisement
ಪತ್ರಕರ್ತರೊಬ್ಬರು ಬೈ ಎಲೆಕ್ಷನ್ ಬಳಿಕ ನೀವು ಆಕ್ಟೀವ್ ಆಗಿದ್ದೀರಿ ಎಂದು ಪ್ರಶ್ನೆ ಕೇಳಿದಾಗ, ನಾನು ಯಾವಾಗಲೂ ಆಕ್ಟೀವ್ ಪರ್ಸನ್. ಕಾನ್ಫಿಡೆನ್ಸ್ ನನಗೆ ಮೊದಲಿನಿಂದಲೂ ಬಂದ ಗುಣ. ಅದು ಬೈ ಎಲೆಕ್ಷನ್ ಬಳಿಕ ಬಂದಿದ್ದಲ್ಲ ಎಂದು ಹೇಳಿದರು.
Advertisement
ಸಚಿವ ಮಹದೇವಪ್ಪರಿಗೆ ಲೆಕ್ಕ ಬರೋಲ್ಲ. ಅದಕ್ಕಾಗಿ ಮಹದೇವಪ್ಪನವರನ್ನ ಜಿಎಸ್‍ಟಿ ಮೀಟಿಂಗ್‍ಗಳಿಗೆ ಕಳುಹಿಸುತ್ತಿದ್ದೇನೆ. ಹೀಗಾಗಿ ಇದೀಗ ಸ್ವಲ್ಪ ಲೆಕ್ಕ ಕಲಿತಿದ್ದಾರೆಂದು ಎಂದು ಸಿಎಂ ಮಾತಿನ ಮಧ್ಯೆ ಹಾಸ್ಯ ಚಟಾಕಿ ಹಾರಿಸಿದ್ರು. ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಹ ಭಾಗಿಯಾಗಿದ್ದರು.
Advertisement
Advertisement