ಬಾಹುಬಲಿ (Bahubali) ನಟ ಪ್ರಭಾಸ್ (Prabhas) ನಾಪತ್ತೆಯಾಗಿದ್ದಾರೆ. ‘ಆದಿಪುರುಷ್’ (Adipurush) ನೀಡಿದ ಮರ್ಮಾಘಾತ ಅಷ್ಟು ಎಫೆಕ್ಟಿವ್ ಆಗಿದೆ. ಸೋಲಿನ ಹಣೆಬರಹ ಗೊತ್ತಿದ್ದೇ ಡಾರ್ಲಿಂಗ್ ಅಮೆರಿಕಾಕ್ಕೆ ಹಾರಿದ್ದರು. ಇದೀಗ ಇನ್ನು ಎರಡು ತಿಂಗಳು ಫ್ಯಾನ್ಸ್ ಹಾಗೂ ಮೀಡಿಯಾ ಕಣ್ಣಿಗೆ ಬೀಳದಂತೆ ಎಚ್ಚರವಹಿಸಿದ್ದಾರೆ.
Advertisement
‘ಆದಿಪುರುಷ್’ ಅಂಗಾತ ಮಲಗಿದ ಮೇಲೆ ಪ್ರಭಾಸ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ತಿರುಪತಿಯಲ್ಲಿ ನಡೆದ ಕಾರ್ಯಕ್ರಮವೇ ಕೊನೆ. ಈಗ ಅಮೆರಿಕದಲ್ಲಿ ಮೊಣಕಾಲು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಜೆಕ್ಟ್ ಕೆ ಗ್ಲಿಂಪ್ಸ್ ಬಿಡುಗಡೆ ಇದೇ ತಿಂಗಳು ಅಮೆರಿಕಾದಲ್ಲಿ ನಡೆಯಲಿದೆ. ಅಲ್ಲಿಗೂ ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ. ಇನ್ನೇನು ಸಲಾರ್ ಟೀಸರ್ ಬಿಡುಗಡೆಯಾಗುತ್ತಿದೆ. ಅದರ ನಂತರ ಜನರ ಮುಂದೆ ಬರುತ್ತಾರಾ? ಉಹುಂ…ಅದೂ ಸಾಧ್ಯ ಇಲ್ಲ ಎನ್ನುವಷ್ಟು ಡಾರ್ಲಿಂಗ್ ಮನಸ್ಸು ಚಿತ್ರಾನ್ನವಾಗಿದೆ. ಇದನ್ನೂ ಓದಿ:18 ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ ರವೀನಾ ಟಂಡನ್ ಪುತ್ರಿ
Advertisement
Advertisement
ಸಲಾರ್ (Saalar) ಹಾಗೂ ಪ್ರಾಜೆಕ್ಟ್ ಕೆ ಈ ಎರಡೂ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಸಲಾರ್ ಸೆಪ್ಟೆಂಬರ್ ಕೊನೇ ವಾರ ಬಿಡುಗಡೆಯಾಗಲಿದೆ. ಹೆಚ್ಚು ಕಮ್ಮಿ ಮೂರು ತಿಂಗಳು. ಸಲಾರ್ ಪ್ರಚಾರದಿಂದ ಮತ್ತೆ ಬಾಹುಬಲಿ ಹೊಸ ಹುರುಪಿನಿಂದ ಅಖಾಡಕ್ಕೆ ಇಳಿಯಲಿದ್ದಾರಂತೆ. ಅದರರ್ಥ ಎರಡು ತಿಂಗಳಾದ ಮೇಲೆಯೇ ಡಾರ್ಲಿಂಗ್ ಮೈ ಕೊಡವಿ ಎದ್ದು ನಿಲ್ಲಲಿದ್ದಾರೆ. ಮೂರು ಸಿನಿಮಾ ಸೋಲಿನಿಂದ ಪಾಠ ಕಲಿತಿದ್ದಾರೆ ಪ್ರಭಾಸ್. ಅಥವಾ ಹಾಗಂತ ನಾವು ತಿಳಿದುಕೊಳ್ಳಬೇಕು.
Advertisement
ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಚಿತ್ರದ ಮೇಲೆ ಪ್ರಭಾಸ್ಗೆ ಭರವಸೆಯಿದೆ. ಈ ಚಿತರವಾದ್ರೂ ಗಲ್ಲಾಪೆಟ್ಟಿಗೆ ಕಮಾಲ್ ಮಾಡಿ ಸಕ್ಸಸ್ ಕಾಣುತ್ತಾರಾ? ಕಾದುನೋಡಬೇಕಿದೆ.