ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್‌ಗೆ (Shraddha Kapoor) ‘ಸ್ತ್ರೀ 2’ (Stree 2) ಸಕ್ಸಸ್ ಬಳಿಕ ಬಂಪರ್ ಸಿನಿಮಾ ಆಫರ್‌ಗಳು ಅರಸಿ ಬರುತ್ತಿವೆ. ಹೀಗಿರುವಾಗ ಈಗ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ಚಿತ್ರಕ್ಕೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ- ಟೀಕಿಸಿದ ನೆಟ್ಟಿಗರು
ಸಕ್ಸಸ್ ಸಿಕ್ತು ಎಂದು ಹಿಗ್ಗದೇ ಸಿನಿಮಾ ಆಯ್ಕೆಯಲ್ಲಿ ಶ್ರದ್ಧಾ ಕಪೂರ್ ಚ್ಯೂಸಿಯಾಗಿದ್ದಾರೆ. ಉತ್ತಮ ಕಥೆ ಹುಡುಕಾಟದಲ್ಲಿದ್ದ ಅವರು ‘ತುಂಬದ್’ ಡೈರೆಕ್ಟರ್ ರಾಹಿ ಅನಿಲ್ ಬರ್ವೆ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಈ ಚಿತ್ರದ ಪ್ರಿ ಪ್ರೊಡಕ್ಷನ್‌ಗೆ ಸುಮಾರು 3ರಿಂದ 4 ತಿಂಗಳು ಬೇಕಿದೆ. 2025ರ ದ್ವಿತೀಯಾರ್ಧದಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಈ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
ಈ ಚಿತ್ರ ಬಿಟ್ಟು ಏಕ್ತಾ ಕಪೂರ್ ಜೊತೆ ಶ್ರದ್ಧಾ ಮತ್ತೊಂದು ಸಿನಿಮಾ ಕೂಡ ಮಾಡಲಿದ್ದಾರೆ. ಚೆಂದದ ಲವ್ ಸ್ಟೋರಿ ಹೇಳಲು ಶ್ರದ್ಧಾ ರೆಡಿಯಾಗಿದ್ದಾರೆ. ಈ ಸಿನಿಮಾಗೆ ‘ಆಶಿಕಿ 2’ ನಿರ್ದೇಶಕ ಮೋಹಿತ್ ಸೂರಿ ನಿರ್ದೇಶನ ಮಾಡಲಿದ್ದಾರೆ. ಇದರೊಂದಿಗೆ ಕರಣ್ ಜೋಹರ್ ನಿರ್ಮಾಣದ ಸಿನಿಮಾ, ‘ಸ್ತ್ರೀ ಪಾರ್ಟ್ 3’ ಕೂಡ ನಟಿಯ ಕೈಯಲ್ಲಿದೆ. ಒಟ್ನಲ್ಲಿ ಶ್ರದ್ಧಾಗೆ ಭರ್ಜರಿ ಅವಕಾಶಗಳು ಸಿಕ್ತಿವೆ. ನಟಿಯ ಚಿತ್ರದ ಲಿಸ್ಟ್ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.